Thursday, June 4, 2026
spot_imgspot_img
spot_imgspot_img

ಉಡುಪಿ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು..!

- Advertisement -
- Advertisement -

ಉಡುಪಿ: ವ್ಯಕ್ತಿಯೋರ್ವರು ಕಟ್ಟಿಗೆ ಕಡಿಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಮಣಿಪಾಲ ನಿವಾಸಿ ಮುರುಗೇಶ್‌ ಎಂದು ಗುರುತಿಸಲಾಗಿದೆ.

ಮನೆಯ ಹತ್ತಿರವಿರುವ ಹಾದಿಯಲ್ಲಿ ಮರವನ್ನು ಹತ್ತಿ ಒಣ ಕಟ್ಟಿಗೆಯನ್ನು ಕಡಿಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಅವರ ಪತ್ನಿ ಕರೆದಾಗ ಮುರುಗೇಶ್‌ ಸ್ಪಂದಿಸದ ಕಾರಣ ಮರದ ಹತ್ತಿರ ಹೋದಾಗ ಅವರು ಮರದ ಕೆಳಗೆ ಅಂಗಾತ ಬಿದ್ದಿದ್ದು, ಅವರನ್ನು ಮುಟ್ಟಿ ಮಾತನಾಡಿಸಿದಾಗ ಅವರು ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಪರೀಕ್ಷಿಸಿ ಮುರುಗೇಶ್‌ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!