Sunday, May 5, 2024
spot_imgspot_img
spot_imgspot_img

ಉಡುಪಿ: ತಾಯಿ-ಮಗಳು ನಾಪತ್ತೆ; ಪತ್ತೆಗಾಗಿ ಮನವಿ

- Advertisement -G L Acharya panikkar
- Advertisement -
vtv vitla

ಉಡುಪಿ: ಮನೆಯಿಂದ ಹೊರಗೆ ಹೋದ ತಾಯಿ -ಮಗಳು ನಾಪತ್ತೆಯಾದ ಘಟನೆ ಉಡುಪಿ ನಗರದ ನಯಂಪಳ್ಳಿಯಲ್ಲಿ ನಡೆದಿದೆ.

ನಯಂಪಳ್ಳಿ ನಿವಾಸಿ ಅಕ್ಷತಾ (32) ಹಾಗೂ ಮಗಳು ಖುಷಿ (9) ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾದವರು.

ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!