Tuesday, April 16, 2024
spot_imgspot_img
spot_imgspot_img

ಅನೈತಿಕ ಸಂಬಂಧ ವಿಚಾರದಲ್ಲಿ ಕೊಲೆ ಪ್ರಕರಣ-ಆರು ಮಂದಿ ಆರೋಪಿಗಳ ಬಂಧನ!

- Advertisement -G L Acharya panikkar
- Advertisement -

ಬ್ರಹ್ಮಾವರ : ಉಡುಪಿ ಜಿಲ್ಲೆಯ ಕರ್ಜೆಯಲ್ಲಿ ನಡೆದ ನವೀನ್ ನಾಯ್ಕ್ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆರೆಕರೆಯ ವಿವಾಹಿತ ಮಹಿಳೆಯ ಮನೆಗೆ ಬರುತ್ತಿ ರುವುದನ್ನು ಪ್ರಶ್ನಿಸಿದ ಕಾರಣಕ್ಕೆ ನವೀನ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 24ಗಂಟೆ ಯೊಳಗೆ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಲ್ಪೆಯ ನಿವಾಸಿಗಳಾದ ಗೌತಮ್(27), ಮನೋಜ್ ಭಂಡಾರಿ(30), ಧನುಷ್(27), ಚೇತನ್ ಕುಮಾರ್(24), ತಿಲಕರಾಜ್(36), ಕದಿಕೆಯ ಸಿದ್ದಾರ್ಥ(23) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಲೆ ಪ್ರಕರಣ ಬೇಧಿಸಲು ಎಸ್.ಪಿ. ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಡಿವೈಎಸ್ಪಿ ಸದಾನಂದ ನಾಯ್ಕ್ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಎಸ್ಸೈ ಗುರುನಾಥ ಬಿ ಹಾದಿಮನಿ,ಮಲ್ಪೆಎಸ್ಸೈ ತಿಮ್ಮೇಶ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!