Monday, June 15, 2026
spot_imgspot_img
spot_imgspot_img

ಉಡುಪಿ: ಅಕ್ರಮ ಮಾದಕ ವಸ್ತು ಮಾರಾಟ; ಮೂವರ ಬಂಧನ, ಓರ್ವ ಪರಾರಿ

- Advertisement -
- Advertisement -

ಉಡುಪಿ: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಸೆ.5ರಂದು ಸಂಜೆ ವೇಳೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿರುವ ಶ್ರೀಬೊಬ್ಬರ್ಯ ದೈವಸ್ಥಾನದ ಬಳಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಉರ್ವ ಬೋಳೂರು ನಿವಾಸಿ ಅಚ್ಚುತ ಎನ್. ಯಾನೆ ಕಿರಣ್ ಮೆಂಡನ್(45), ಗುಜ್ಜರಬೆಟ್ಟುವಿನ ಪುನೀತ್ ಯಾನೆ ಪುನೀತ್ ರಾಜ್(24), ಒಡಿಸ್ಸಾ ಮೂಲದ ಪ್ರಸ್ತುತ ಪಡುತೋನ್ಸೆ ನಿವಾಸಿ ಚಂದ್ರಕಾಂತ ಕಟ್ವ ಎಂದು ಗುರುತಿಸಲಾಗಿದೆ. ಪೊಲೀಸ್ ದಾಳಿ ವೇಳೆ ಕೊಳಲಗಿರಿಯ ಕಿಶೋರ ಎಂಬಾತ ಪರಾರಿಯಾಗಿದ್ದಾನೆ.

ಆರೋಪಿಗಳು ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಪೊಲೀಸರನ್ನು ಕಂಡು ಓರ್ವ ಆರೋಪಿ ಓಡಿ ಹೋಗಿದ್ದು, ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ 3‌ ಗ್ರಾಂ 480 ಮಿಲ್ಲಿ ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 3,000ರೂ. ಹಾಗೂ MDMAನ ಅಂದಾಜು ಮೌಲ್ಯ 10,000 ರೂ. ಎಂದು ಅಂದಾಜಿಸಲಾಗಿದೆ. ಎಂಡಿಎಎ ಮತ್ತು ಕೃತ್ಯಕ್ಕೆ ಬಳಸಿದ 1,50,000 ರೂ. ಮೌಲ್ಯದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 98/2025, ಕಲಂ: 8ಎ(ಸಿ)‌,20(b)(ii)a&b NDPS ACTರಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!