Wednesday, July 29, 2026
spot_imgspot_img
spot_imgspot_img

ಉಡುಪಿ: ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪ; ಶಿಕ್ಷಕ ವಜಾ

- Advertisement -
- Advertisement -

ಉಡುಪಿ: ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನ್ನೊಬ್ಬನನ್ನು ವಜಾ ಮಾಡಿರುವ ಘಟನೆ ಕಾರ್ಕಳದ ಮಿಯಾರು ಗ್ರಾಮದಲ್ಲಿ ನಡೆದಿದೆ.

ಮಿಯಾರು ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಲಬುರ್ಗಿ ಮೂಲದ ಮದರಸ್ ಮಕಾಂದಾರ್ ಕರ್ತವ್ಯದಿಂದ ವಜಾಗೊಂಡ ಶಿಕ್ಷಕ.

ವಸತಿ ಶಾಲಾ ವಿದ್ಯಾರ್ಥಿಗಳಿಗೆ ನಿರಂತರ ಬಸ್ಕಿ ಹೊ ಡೆಸಿರುವುದಲ್ಲದೇ, ಜನಿವಾರ ಮತ್ತು ಕೈಗೆ ಕಟ್ಟುವ ದಾರದ ಬಗ್ಗೆ ಪ್ರಶ್ನಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಪ್ರಾಂಶುಪಾಲರು ಎಚ್ಚರಿಕೆಯನ್ನೂ ನೀಡಿದ್ದರಂತೆ. ಆದರೂ ಆತ ಇದೇ ಚಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಿ ಪ್ರಾಂಶುಪಾಲರು ಆದೇಶಿಸಿದ್ದಾರೆ.

- Advertisement -

Related news

error: Content is protected !!