Thursday, April 25, 2024
spot_imgspot_img
spot_imgspot_img

ಕ್ಯಾಡ್ಬರಿ ಚಾಕ್ಲೇಟ್ ನಲ್ಲಿ ದನದ ಮಾಂಸ ಬಳಕೆ; ಸ್ಪಷ್ಟನೆ ನೀಡಿದ ಕಂಪೆನಿ!

- Advertisement -G L Acharya panikkar
- Advertisement -

ಯಕ್ಸ್’ಬ್ರಿಡ್ಜ್(ಯುಕೆ): ಕ್ಯಾಡ್ಬರಿ‌ ಚಾಕ್ಲೇಟ್ ಅನ್ನು ಖುಷಿ ಖುಷಿಯಾಗಿ ಸವಿಯುತ್ತಿದ್ದ ಬಹುತೇಕ ಭಾರತೀಯರಿಗೆ ಆಘಾತಕಾರಿ‌ ಮಾಹಿತಿಯನ್ನು ಕ್ಯಾಡ್ಬರಿ ಕಂಪನಿ ನೀಡಿದೆ.

ಕ್ಯಾಡ್ಬರಿ ಚಾಕ್ಲೇಟ್ ನಲ್ಲಿ ದನದ ಮಾಂಸ ಬಳಸುತ್ತಿರುವುದಾಗಿ ಕಂಪನಿ ಒಪ್ಪಿಕೊಂಡಿದೆ. ಆದರೆ, ಭಾರತದಲ್ಲಿ ಶುದ್ಧ ಸಸ್ಯಾಹಾರಿ ಚಾಕ್ಲೇಟ್ ಗಳನ್ನಷ್ಟೇ ಮಾರಾಟ ಮಾಡಲಾಗುತ್ತಿದೆ ಎಂದು ಕಂಪನಿ‌ ಹೇಳಿದೆ. ಕಳೆದೊಂದು ವಾರದಿಂದ ಸಾಮಾಜಿಕ‌ ಜಾಲತಾಣ ಸೇರಿ ವಿವಿಧ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಭಾರೀ ಚರ್ಚೆಗೆ ತೆರೆ ಎಳೆದಿದೆ.

ವೆಬ್ ಸೈಟ್ವೊಂದರಲ್ಲಿ ಕ್ಯಾಡ್ಬರಿಯಲ್ಲಿ ದನದ ಮಾಂಸ ಬಳಸುತ್ತಿದ್ದಾರೆ ಎಂದು ವರದಿ ಪ್ರಕಟವಾದ ಬಳಿಕ ‘ಭಾರತದಲ್ಲಿ ಕ್ಯಾಡ್ಬರಿ ಚಾಕ್ಲೇಟ್ಗಳನ್ನು ಬ್ಯಾನ್ ಮಾಡಬೇಕು’ ಎಂದು boycottCadburyChocolate ಹ್ಯಾಷ್ಟ್ಯಾಗ್ನಲ್ಲಿ ಅಭಿಯಾನ ಆರಂಭವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ, ಕ್ಯಾಡ್ಬರಿ ಕಂಪನಿ ಕ್ಯಾಡ್ಬರಿ ಚಾಕ್ಲೇಟ್ನಲ್ಲಿ ದನದ ಮಾಂಸ ಬಳಸಲಾಗಿದೆ. ಆದರೆ ದನದ ಮಾಂಸ ಬಳಸಿ ಮಾಡಿರುವ ಚಾಕ್ಲೇಟ್ಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿಲ್ಲ. ಆಸ್ಟ್ರೇಲಿಯಾ ಸೇರಿದಂತೆ ಕೆಲ ವಿದೇಶಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಭಾರತದ ಕ್ಯಾಡ್ಬರಿ ಕಂಪನಿ ಟ್ವೀಟ್ ಮೂಲಕ ತಿಳಿಸಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!