Monday, January 25, 2021

ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬಂಟ್ವಾಳ(ನ,3): ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು(ರಿ) ಇಲ್ಲಿನ ರಜತಾದ್ರಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ದಿನಾಂಕ 03/11/2020ನೇ ಮಂಗಳವಾರದಿಂದ 05/11/2020ನೇ ಗುರುವಾರದವರೆಗೆ ನಡೆಯಲಿದೆ.

ದಿನಾಂಕ 03/11/2020ನೇ ಮಂಗಳವಾರದಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನದ ನಂತರ 6 ಗಂಟೆಗೆ ಪುಣ್ಯಾರ್ಚನೆ ನಂತರ ಅಘೋರ ಹೋಮ ಹಾಗೂ ಪರಿಹಾರ ಕ್ರಿಯೆಗಳು ಬಿಂಬ ಆಯುಧ ಜಲಾಧಿವಾಸ. ದಿನಾಂಕ 04/11/2020ನೇ ಬುಧವಾರ ಬೆಳಗ್ಗೆ 6 ಗಂಟೆಗೆ ಗಣಹೋಮ ನಂತರ ಶಯ್ಯಾಪೂಜೆ , ಜೀವಕಲಶ ಪೂಜೆ . ಸಂಜೆ 6 ಗಂಟೆಗೆ ವಾಸ್ತು ಪ್ರಾಸಾದ ಶುದ್ಧಿ, ವಾಸ್ತು ಬಲಿ ಪ್ರಾಸಾದ ಅಧಿವಾಸ.

ದಿನಾಂಕ 05/11/2020ನೇ ಗುರುವಾರ ಬೆಳಗ್ಗೆ 6 ಗಂಟೆಗೆ ಗಣಹೋಮ, ಪ್ರಾಸಾದ ಪ್ರತಿಷ್ಠೆ, ‘ಶ್ರೀ ದೇವಿ ಪ್ರತಿಷ್ಠೆ’, ದೈವಗಳ ಪ್ರತಿಷ್ಠೆ, ವಾರ್ಷಿಕ ನಾಗತಂಬಿಲ , ಆಶ್ಲೇಷ ಬಲಿ, ಮಹಾಪೂಜೆ ನಡೆದು , ಮಧ್ಯಾಹ್ನ 12ಗಂಟೆಗೆ ಪ್ರಸಾದ ವಿತರಣೆಯಾಗಿ ಮಂತ್ರಾಕ್ಷತೆ. ಇಲ್ಲಿ ಉತ್ಸವದ ಪ್ರತಿದಿನ ಮಧ್ಯಾಹ್ನ 1ಗಂಟೆಗೆ ಮತ್ತು ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!