Sunday, May 19, 2024
spot_imgspot_img
spot_imgspot_img

ಬ್ರಿಟನ್ ಪ್ರಧಾನಿಯ ಭಾರತ ಭೇಟಿ ರದ್ದು!

- Advertisement -G L Acharya panikkar
- Advertisement -

ನವದೆಹಲಿ :  ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿತರಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೋವಿಡ್ ರೂಪಾಂತರಿ ಹೆಚ್ಚುತ್ತಿರುವ ಕಾರಣದಿಂದ ತಮ್ಮ ಭಾರತ ಭೇಟಿಯನ್ನು ರದ್ದು ಮಾಡಿದ್ದಾರೆ.

ಜನವರಿ 26 ರಂದು ಭಾರತದ ಗಣರಾಜ್ಯೋತ್ಸವಕ್ಕೆ ಈ ಬಾರಿ ವಿಶೇಷ ಅತಿಥಿಯಾಗಿ ಆಹ್ವಾನವಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ , ಬ್ರಿಟನ್ ನಲ್ಲಿ ಹೆಚ್ಚುತ್ತಿರುವ  ಕೋವಿಡ್ ಪ್ರಮಾಣವನ್ನು ಮನಗಂಡು, ದೇಶದ ಹಿತದೃಷ್ಟಿಯಿಂದ ತಮ್ಮ ಭಾರತ ಪ್ರವಾಸವನ್ನು ರದ್ದು ಮಾಡುತ್ತೇನೆ. ದೇಶದಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಈ ಕುರಿತು ಹೆಚ್ಚಿನ ಗಮನ ಹರಿಸಿ, ಕೋವಿಡ್ ನಿಯಂತ್ರಣ ಮಾಡುವ ಕಡೆ ಹೆಚ್ಚಿನ ಒತ್ತನ್ನು ನೀಡಬೇಕಿದೆ  ಎಂದು ಪ್ರಧಾನಿ ಮೋದಿಗೆ ದೂರವಾಣಿ ಮೂಲಕ ಪ್ರವಾಸ ರದ್ದು ಮಾಡಿದ್ದರ ಕುರಿತು  ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!