Monday, July 20, 2026
spot_imgspot_img
spot_imgspot_img

ಉಳ್ಳಾಲ: ಹೃದಯಾಘಾತಕ್ಕೆ ವ್ಯಕ್ತಿ ಸಾವು!

- Advertisement -
- Advertisement -

ಉಳ್ಳಾಲ: ಮುಡಿಪು ಕೈರಂಗಳ ದುಗ್ಗಜ್ಜರಕಟ್ಟೆ ಸುಟ್ಟ ನಿವಾಸಿ ಹಾಜಿ ಉಮ್ಮರ್ ಸಿದ್ದೀಕ್ ಅವರ ಪುತ್ರ ಎನ್.ಎಸ್.ಶರೀಫ್ (47) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದ ಘಟನೆ ನಡೆದಿದೆ. ಕೈರಂಗಳ ತೋಟಾಲ್ ಜುಮ್ಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ಮುಗಿಸಿದ್ದು, ಅವರು ಹಠಾತ್ತನೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು. ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಹೆಸರನ್ನು ಸಂಪಾದಿಸಿದ್ದರು.

ವೃತ್ತಿಯಲ್ಲಿ ಎಲೆಕ್ನಿಕ್ ಸಾಧನಗಳನ್ನು ಸರ್ವಿಸ್ ಮಾಡುತ್ತಿದ್ದ ಶರೀಫ್ ಅವರು ಮನೆ ಸಮೀಪ ಸರ್ವಿಸ್ ಶಾಪ್ ಹೊಂದಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ, ಮೂವರು ಸಹೋದರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!