Wednesday, April 23, 2025
spot_imgspot_img
spot_imgspot_img

ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

- Advertisement -
- Advertisement -

ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರ ರಕ್ಷಿಸಿರುವ ಘಟನೆ ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿ (ಮಾ. 21) ನಿನ್ನೆ ಸಂಜೆ ವೇಳೆ ನಡೆದಿದೆ.

ಉತ್ತರ ಪ್ರದೇಶ ಮೂಲದ 11 ಮಂದಿ ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದರು. ಈ ಪೈಕಿ ನಾಲ್ವರು ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಇದರಲ್ಲಿ ಯುವಕನೋರ್ವ ಸಮುದ್ರದ ಅಲೆಗಳ ನಡುವೆ ಸಿಲುಕಿ ಸುಮಾರು 40 ಮೀ ನಷ್ಟು ದೂರ ಎಳೆದೊಯ್ದಿದ್ದರು.

ಘಟನೆಯನ್ನು ಕಂಡ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ ಮತ್ತು ಸ್ಥಳೀಯ ಈಜುಗಾರ ಕಿರಣ್ ಒಂಭತ್ತುಕೆರೆ ಎಂಬವರು ಸೇರಿ ಸಮುದ್ರಕ್ಕೆ ಧುಮುಕಿ ಬಹಳಷ್ಟು ಸೆಣಸಾಡಿ ಯುವಕನನ್ನು ದಡ ಸೇರಿಸಿ ಪ್ರಾಣವನ್ನು ರಕ್ಷಿಸಿದ್ದಾರೆ.

- Advertisement -

Related news

error: Content is protected !!