- Advertisement -
- Advertisement -
ಉಳ್ಳಾಲ: ನೇತ್ರಾವತಿ ನದಿ ಸೇತುವೆಗೆ ನಡೆಯುತ್ತಿರುವ ತಡೆಬೇಲಿ ನಿರ್ಮಾಣ ಕಾರ್ಯಕ್ಕೆ ಸೇತುವೆ ಮೇಲಿರಿಸಿದ್ದ ವೆಲ್ಡಿಂಗ್ ಮೆಷಿನ್ ನಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿದೆ.
ವೆಲ್ಡಿಂಗ್ ಮೆಷಿನ್ ನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಆವರಿಸಿದ್ದು, ಸೇತುವೆ ಮೇಲೆ ದಟ್ಟ ಹೊಗೆ ಹಬ್ಬಿದೆ.
ನೇತ್ರಾವತಿ ನದಿ ಸೇತುವೆ ತಡೆಬೇಲಿ ನಿರ್ಮಾಣದಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ.!Posted by VTV on Sunday, 19 July 2020
ಸೇತುವೆಯ ಮೇಲೆ ಬೆಂಕಿ ಕಂಡು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.ಉಳ್ಳಾಲ ನೇತ್ರಾವತಿ ನದಿ ಸೇತುವೆಯಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಸೇತುವೆಗೆ ತಡೆಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ.
- Advertisement -