Sunday, May 5, 2024
spot_imgspot_img
spot_imgspot_img

ಉಳ್ಳಾಲ: ಕಾರಿನ ನಂಬರ್ ಪ್ಲೇಟ್ ನಲ್ಲಿದ್ದ ಓಂ ಸಾಯಿ, ಕೊರಗಜ್ಜ ಹೆಸರಿನ ಸ್ಟಿಕ್ಕರ್ ತೆಗೆಯುವಂತೆ ತಕರಾರು ತೆಗೆದ ಟ್ರಾಫಿಕ್ ASI!

- Advertisement -G L Acharya panikkar
- Advertisement -

ಉಳ್ಳಾಲ: ಕಾರಿನ ನಂಬರ್ ಪ್ಲೇಟ್ ನಲ್ಲಿದ್ದ ಓಂ ಸಾಯಿ ಮತ್ತು ಕೊರಗಜ್ಜ ಹೆಸರಿನ ಸ್ಟಿಕ್ಕರ್ ತೆಗೆಯಲು ಮುಂದಾದ ಟ್ರಾಫಿಕ್ ಎಎಸೈ ವಿರುದ್ಧ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.

ಮಾರುತಿ 800 ಕಾರೊಂದರಲ್ಲಿ ಓಂ ಸಾಯಿ, ಸ್ವಾಮಿ ಕೊರಗಜ್ಜ ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಇದ್ದ ಕಾರಣ ತೊಕ್ಕೊಟ್ಟು ಫೈ ಓವರ್ ಅಡಿಯಲ್ಲಿ ಕಾರನ್ನು ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಎಸೈ ರಾಬರ್ಟ್ ಲಸ್ರಾದೊ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಬೀಶ್ ಪೂಜಾರಿ ಎಂಬವವರ ಮಾರುತಿ ಕಾರು ಇದಾಗಿದ್ದು, ತೊಕ್ಕೊಟ್ಟು ಫೈಓವರ್ ನಲ್ಲಿ ಹಾದು ಹೋಗುತ್ತಿದ್ದ ಸಂದರ್ಭ ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಎಸೈ ರಾಬರ್ಟ್ ಪರಿಶೀಲಿಸಿದ್ದಾರೆ. ದಾಖಲೆಗಳು ಸಮರ್ಪಕವಾಗಿದ್ದು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಗಳನ್ನ ಕಳಚಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.

ಇದರಿಂದ ವಿಚಲಿತರಾದ ಕಾರು ಚಾಲಕ ಬಬೀಶ್ ಪೂಜಾರಿ ಕೂಡಲೇ ಬಜರಂಗದಳ ಸಂಘಟನಾ ಪ್ರಮುಖರು ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರಲ್ಲಿ ಹೇಳಿದ್ದಾರೆ. ಸ್ಥಳಕ್ಕೆ ಬಂದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಅವರ ಜೊತೆಗೂ ಎಎಸೈ ರಾಬರ್ಟ್ ಲಸ್ರಾದೊ ಅವರು ಉಡಾಫೆಯಿಂದ ಮಾತನಾಡಿದ್ದು ಇದರಿಂದ ಕೆರಳಿದ ಹಿಂದೂ ಸಂಘಟನೆ ಸದಸ್ಯರು ಜಮಾಯಿಸಿ ಪ್ರತಿಭಟಿಸಿದ್ದಾರೆ.ಪ್ರತಿಭಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಆಗಮಿಸಿ ಮಾತುಕತೆ ನಡೆಸಿದ್ದಾರೆ.

- Advertisement -

Related news

error: Content is protected !!