- Advertisement -
- Advertisement -
ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಹುಡುಕಾಟ ನಡೆಸಿ ಏನೂ ಸಿಗದಿದ್ದಾಗ ಅಂಗಳದಲ್ಲಿ ನಿಲ್ಲಿಸಿದ ಕಾರನ್ನು ಕದ್ದೊಯ್ದ ಘಟನೆ ನಡೆದಿದೆ.
ಮುಕ್ಕಚ್ಚೇರಿ ನಿವಾಸಿ ಅಬೂಸಾಲಿ ಎಂಬವರು ಮನೆಯನ್ನು ಹನೀಫ್ ನೋಡಿಕೊಳ್ಳುತ್ತಿದ್ದರು. ಅಬೂಸಾಲಿಯವರು ಪುತ್ರರೊಂದಿಗೆ ವಿದೇಶದಲ್ಲಿದ್ದಾರೆ. ಎರಡು ದಿನಗಳ ಹಿಂದೆ ಬಕ್ರೀದ್ ನಿಮಿತ್ತ ಹನೀಫ್ ಮನೆಗೆ ಬೀಗ ಹಾಕಿ ತನ್ನ ಊರಿಗೆ ತೆರಳಿದ್ದರು. ಈ ಸಮಯದಲ್ಲಿ ಕಳ್ಳರು ಮನೆಯ ಮೊದಲ ಮಹಡಿಯ ಬಾಗಿಲು ಮುರಿದು ಒಳನುಗ್ಗಿ ಇಡೀ ಮನೆಯ ಕಪಾಟುಗಳನ್ನೆಲ್ಲಾ ಜಾಲಾಡಿದ್ದಾರೆ. ಈ ವೇಳೆ ಕಳ್ಳರಿಗೆ ಮನೆಯಲ್ಲಿ ಏನು ಸಿಗದಿರುವುದರಿಂದ ಕಪಾಟಿನ ಬದಿಯಲ್ಲಿಟ್ಟಿದ್ದ ಕಾರಿನ ಕೀಯನ್ನು ಬಳಸಿ ಕಾರು ಕದ್ದೊಯ್ದಿದ್ದಾರೆ.
- Advertisement -