Friday, March 29, 2024
spot_imgspot_img
spot_imgspot_img

ಉಳ್ಳಾಲ: ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು – ಕೊರಗಜ್ಜ, ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹದ ಪ್ಲೆಕ್ಸ್ ಪತ್ತೆ!

- Advertisement -G L Acharya panikkar
- Advertisement -

ಉಳ್ಳಾಲ: ಉಳ್ಳಾಲ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಯಾರೋ ಕಿಡಿಗೇಡಿಗಳು ಕಾಂಡಮ್ ಗಳನ್ನು ಹಾಕಿದ್ದಲ್ಲದೆ, ಸಿಎಂ ಬಿಎಸ್ ವೈ ಮತ್ತು ಅವರ ಪುತ್ರನ ಭಾವಚಿತ್ರಕ್ಕೆ ಶಿಲುಬೆಯ ಚಿತ್ರ ಬಿಡಿಸಿ, ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ವಿಕೃತಿ ಮೆರೆದ ದೃಶ್ಯ ಕಂಡುಬಂದಿದೆ.

ಪ್ರತೀ ತಿಂಗಳ ಸಂಕ್ರಾತಿಯಂದು ಇಲ್ಲಿನ ಸೇವಾ ಸಮಿತಿಯವರು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆಯಿದ್ದು, ಈ ಬಾರಿ ಸ್ವಲ್ಪ ತಡವಾಗಿ ಮಂಗಳವಾರ ಸಂಜೆ ಕಾಣಿಕೆ‌ ಡಬ್ಬಿ ತೆರೆದು ನೋಡಿದಾಗ ಕಾಂಡೋಮ್ ಗಳು ಮತ್ತು ಪ್ರಚೋದನಕಾರಿ ಬರಹಗಳಿದ್ದ ಬೆಂಗಳೂರಿನ ಕೆ.ಆರ್.ಐ.ಡಿ.ಎಲ್ ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಪ್ಲೆಕ್ಸ್ ಒಂದು ಲಭಿಸಿದೆ.

ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಅಮಿತ್ ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರ ಭಾವ ಚಿತ್ರಗಳಿದ್ದು ಎಲ್ಲವನ್ನೂ ಗೀಚಿ ವಿರೂಪಗೊಳಿಸಲಾಗಿದೆ. ಅಲ್ಲದೇ ಬಿ.ಎಸ್.ವೈ ಮತ್ತು ಅವರ ಪುತ್ರ ವಿಜಯೇಂದ್ರ ಫೋಟೊದ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರ ಬಿಡಿಸಲಾಗಿದೆ. ಈ ಕುರಿತು ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!