Saturday, January 25, 2025
spot_imgspot_img
spot_imgspot_img

 ಕೊರೊನಾಗೆ  ‘ಕೊಡೇಸ್ ರಮ್ ‘ ಮದ್ದಂತೆ ! ಉಳ್ಳಾಲ ನಗರಸಭಾ ಸದಸ್ಯನ ವಿಡಿಯೋ ವೈರಲ್.!

- Advertisement -
- Advertisement -

ಮಂಗಳೂರು:-“ಕೋಡೇಸ್ ರಮ್ಗೆ ಎಡ್ಡೆ ಮುಂಚಿ(ಕರಿಮೆಣಸು) ಸೇರಿಸಿ ಕುಡಿದರೆ ಕೊರೊನಾ ಹತ್ತಿರ ಸುಳಿಯಲ್ವಂತೆ. ಎರಡು ಮೊಟ್ಟೆಗೆ ಕರಿಮೆಣಸು ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ  ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ..” ಹೀಗೆಂದು ಬಿಟ್ಟಿ ಉಪದೇಶ ನೀಡಿದ ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯ ಪಾನಕ ರವಿ ಯಾನೆ ರವಿಚಂದ್ರ ಗಟ್ಟಿಯವರ ವೀಡಿಯೋ.ಈಗ ಅದು ಜಾಲತಾಣದಲ್ಲಿ ವೈರಲ್ ಆಗಿದೆ. ನಗರಸಭಾ ಸದಸ್ಯನಾಗಿ ಜನಸಾಮಾನ್ಯರಿಗೆ ಇಂಥ ಸಲಹೆ ನೀಡಿದ್ದು ಎಷ್ಟು ಸರಿ ಎಂದು ಜನರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿಚಂದ್ರ ಗಟ್ಟಿ ಅವರು ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದು ತೊಕ್ಕೊಟ್ಟಿನಲ್ಲಿ ಪಾನಕ ರವಿ, ಪಾಂತೆ ರವಿ ಎಂದು ಹೆಸರಾದವರು. ಕಳೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಜಯ ಗಳಿಸಿದ್ದರು.

ಜನಪ್ರತಿನಿಧಿಯಾಗಿರುವ ರವಿ ಅವರು ಕೊಡೇಸ್ ರಮ್ ತುಂಬಿರುವ ಬಾಟಲಿ ಹಿಡಿದು ,ಮಹಾಮಾರಿ ಕೊರೊನಾವನ್ನು ತಮಾಷೆಗಾಗಿ ಉಪಯೋಗಿಸಿ ಜನರಿಗೆ
ಕೊರೊನಾ ವಾಸಿಯಾಗಲು ಮದ್ಯಪಾನ ಮಾಡಿ ಎಂದು ಪ್ರೇರೇಪಿಸುವುದು ತಪ್ಪು ಸಂದೇಶ ರವಾನಿಸುವುದಲ್ಲದೆ, ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಮಕ್ಕಳು ಈ ವೀಡಿಯೋ ನೋಡಿ ಕೊರೊನಾಕ್ಕೆ ಔಷಧವೆಂದು ಕುಡಿದರೆ ಗತಿ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

- Advertisement -

Related news

error: Content is protected !!