Wednesday, June 23, 2021
spot_imgspot_img
spot_imgspot_img

ಉಳ್ಳಾಲ: ಮೊಬೈಲ್ ಗಾಗಿ ಮನೆಯಲ್ಲಿ ಜಗಳವಾಡಿದ್ದ ಯುವಕ ನಾಪತ್ತೆ!

- Advertisement -
- Advertisement -

ಮಂಗಳೂರು: ಉಳ್ಳಾಲದ ಕೆ.ಸಿ.ನಗರ ಫಲಾಹ್ ಶಾಲೆ ಬಳಿಯ ಯುವಕನೊಬ್ಬ ನಾಪತ್ತೆ ಆಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಖ್ ಝಾಹಿದ್ ನಿಝ್ಮಾನ್ (19) ನಾಪತ್ತೆಯಾದ ಯುವಕನೆಂದು ತಿಳಿದುಬಂದಿದ್ದು, ಕಳೆದ ಗುರುವಾರ ಮೊಬೈಲ್ ವಿಚಾರವಾಗಿ ಮನೆಯಲ್ಲಿ ಜಗಳವಾಡಿದ್ದ ಶೇಖ್ ಝಾಹಿದ್ ನಿಝ್ಮಾನ್ ಬಳಿಕ ಹೋದವರು ಮನೆಗೆ ವಾಪಾಸು ಬಾರದೆ ನಾಪತ್ತೆ ಆಗಿದ್ದಾರೆ ಎಂದು ಆತನ ತಂದೆ ನಝೀರ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಉಳ್ಳಾಲ ಪೊಲೀಸ್ ಠಾಣೆ 0824-2466269 ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!