Wednesday, June 24, 2026
spot_imgspot_img
spot_imgspot_img

ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಾಮಾಜಿಕ ಕಾರ್ಯಕರ್ತ ಸೇರಿದಂತೆ ಸಾರ್ವಜನಿಕರು ಹಿಡಿದು ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಮೂಲತ: ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸಿಸುವ ಆರೀಫ್ ಪಾಷಾ(30) ಬಂಧಿತ. ಆರೋಪಿ ಕೂಲಿ ಕಾರ್ಮಿಕನಾಗಿದ್ದಾನೆ. ತಿನ್ನಲು ಮಾಂಸ ಕೊಡಿಸುವುದಾಗಿ ನಂಬಿಸಿ ಬಾಲಕಿ ತಂದೆಗೆ ಪರಿಚಿತನಾಗಿರುವ ಆರೋಪಿ, ಮನೆಯಿಂದಲೇ ಕರೆತಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಓಡಿ ತಪ್ಪಿಸುವ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬಾಲಕಿಯನ್ನು ಗಮನಿಸಿದ್ದು ಕೇಳಿದಾಗ ನಡೆದ ಕೃತ್ಯವನ್ನು ಬಾಲಕಿ ತಿಳಿಸಿದ್ದಾಳೆ.

ಸ್ಥಳೀಯರ ಸಹಕಾರದಿಂದ ಆರೋಪಿ ಆರೀಫ್ ಪಾಷಾ ನನ್ನು ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!