- Advertisement -
- Advertisement -
ಉಳ್ಳಾಲ: ಕೂಲಿ ಕಾರ್ಮಿಕನೋರ್ವ ಕೆಲಸ ಮುಗಿಸಿ ಕೈ ಕಾಲು ತೊಳೆಯಲೆಂದು ಕೆರೆಗಿಳಿದ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೆ.ಸಿ. ರೋಡ್ ಅಜ್ಜಿನಡ್ಕ ಎಂಬಲ್ಲಿ ಮನೆಯೊಂದರ ಫೌಂಡೇಶನ್ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು ಕಾಸರಗೋಡು ಜಿಲ್ಲೆಯ ತೂಮಿನಾಡು ಮೂಲದ ಇಬ್ರಾಹಿಂ (30) ಎಂದು ಗುರುತಿಸಲಾಗಿದೆ. ಇಬ್ಬರು ಕೂಲಿ ಕಾರ್ಮಿಕರೊಂದಿಗೆ ಅಜ್ಜಿನಡ್ಕದಲ್ಲಿ ಕೆಲಸ ಮಾಡಿದ್ದ ಇಬ್ರಾಹಿಂ ಸಂಜೆ ಕೆಲಸ ಮುಗಿಯುತ್ತಿದ್ದಂತೆ ಕೆರೆಯೊಂದರಲ್ಲಿ ಕೈ ಕಾಲು ತೊಳೆಯುತ್ತಿದ್ದ ವೇಳೆ ಆಯತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -