Friday, April 26, 2024
spot_imgspot_img
spot_imgspot_img

ಉತ್ತರ ಪ್ರದೇಶದ ಎಲ್ಲ MLA, MLCಗಳಿಗೂ ಆ್ಯಪಲ್ ಐಪ್ಯಾಡ್ ಖರೀದಿಸುವಂತೆ ಯೋಗಿ ಸರ್ಕಾರ ಆದೇಶ!

- Advertisement -G L Acharya panikkar
- Advertisement -

ಲಖನೌ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಎಲ್ಲಾ ಎಮ್​ಎಲ್​ಎ ಮತ್ತು ಎಮ್​ಎಲ್​ಸಿಗಳಿಗೆ 50,000 ರೂ ಮೌಲ್ಯದ ತಲಾ ಒಂದೊಂದು ಆ್ಯಪಲ್ ಐಪ್ಯಾಡ್ ಖರೀದಿಸುವಂತೆ ತಿಳಿಸಿದೆ.

ಐಪ್ಯಾಡ್ ಖರೀದಿಸಲು ಎಮ್​ಎಲ್​ಎ ಮತ್ತು ಎಮ್​ಎಲ್​ಸಿಗಳು ಖರ್ಚು ಮಾಡಿದ 50,000 ಹಣವನ್ನ ಸರ್ಕಾರ ವಾಪಸ್ ಮಾಡಲಿದೆ ಎಂದು ಯುಪಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ, ಮತ್ತು ಟ್ಯಾಬ್ ಬಳಕೆ ಬಗ್ಗೆ ಎಲ್ಲರಿಗೂ ಟ್ರೈನಿಂಗ್ ನೀಡಲಾಗುವುದು ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 403 ಎಮ್​ಎಲ್​ಎಗಳು ಮತ್ತು 100 ಎಮ್​ಎಲ್​ಸಿಗಳಿದ್ದಾರೆ.

ಯೋಗಿ ಆದಿತ್ಯನಾಥ್ ಸರ್ಕಾರ ಪೇಪರ್​ಲೆಸ್ ಬಜೆಟ್ ಮಂಡಿಸಲು ತಯಾರಿ ನಡೆಸಿಕೊಳ್ಳುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಲ್ಲ ಎಮ್​ಎಲ್​ಎ, ಎಮ್​ಎಲ್​ಸಿಗಳಿಗೂ ಟ್ಯಾಬ್ ಖರೀದಿಸುವಂತೆ ಸೂಚಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!