Thursday, March 28, 2024
spot_imgspot_img
spot_imgspot_img

ಸ್ವಯಂಚಾಲಿತ ಬಿಲ್ ಗಳ ಪಾವತಿ ಹಾಗೂ ಒಟಿಟಿ ಪ್ಲಾಟ್‌ಫಾರಂ ಬಳಕೆ ಮೇಲೆ ಹೆಚ್ಚುವರಿ ದೃಢೀಕರಣ ಜಾರಿ: ಸೆಪ್ಟೆಂಬರ್ 30 ರವರೆಗೂ ಗಡುವು ವಿಸ್ತರಿಸಿದ ಆರ್ ಬಿ ಐ

- Advertisement -G L Acharya panikkar
- Advertisement -

ನವದೆಹಲಿ: ಸ್ವಯಂಚಾಲಿತ ಬಿಲ್’ಗಳ ಪಾವತಿ ಹಾಗೂ ಒಟಿಟಿ ಪ್ಲಾಟ್‌ಫಾರಂ ಬಳಕೆ ಮೇಲೆ ಹೆಚ್ಚುವರಿ ದೃಢೀಕರಣ ಜಾರಿಗೊಳಿಸುವ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30ರವರೆಗೂ ವಿಸ್ತರಿಸಿದೆ.

ಮೊಬೈಲ್, ವಿದ್ಯುತ್ ಹಾಗೂ ಇನ್ನಿತರೆ ಬಿಲ್‌ಗಳ ಪಾವತಿಗಾಗಿ ಬ್ಯಾಂಕ್‌ ಖಾತೆಯಿಂದ ಮಾಡುತ್ತಿದ್ದ ಸ್ವಯಂಚಾಲಿತ ಪಾವತಿ (ಆಟೊ ಡೆಬಿಟ್) ಹಾಗೂ ಒಟಿಟಿ ಪ್ಲಾಟ್‌ಫಾರಂ ಬಳಕೆ ಮೇಲೆ ಏಪ್ರಿಲ್ 1ರಿಂದ ಹೆಚ್ಚುವರಿ ದೃಢೀಕರಣ ನಿಯಮ ಜಾರಿಯಾಗಬೇಕಿತ್ತು.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಅಥವಾ ಇನ್ನಿತರ ಪ್ರಿಪೇಡ್ ಇನ್‌ಸ್ಟ್ರುಮೆಂಟ್ (ಪಿಪಿಐ) ಮೂಲಕ ಮಾಡುವ ಸ್ವಯಂಚಾಲಿತ ವಹಿವಾಟಿನ ಕುರಿತು ಆರ್‌ಬಿಐನ ಹೆಚ್ಚುವರಿ ದೃಢೀಕರಣದ ಸೂಚನೆಯನ್ನು ಅಳವಡಿಸಲು ಮತ್ತಷ್ಟು ಸಮಯ ಬೇಕು ಎಂದು ಬ್ಯಾಂಕ್‌ಗಳು ಹಾಗೂ ಪಾವತಿ ಗೇಟ್‌ವೇಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿದೆ ಎಂದು ಆರ್’ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ತಿಳಿಸಿದೆ.

ಹೊಸ ನಿಯಮದ ಪ್ರಕಾರ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರಿಕರಿಂಗ್ ಪೇಮೆಂಟ್‌ ಮುಂದುವರಿಯಲು ಗ್ರಾಹಕರಿಂದ ಹೆಚ್ಚುವರಿ ದೃಢೀಕರಣದ ಅಗತ್ಯವಿರುತ್ತದೆ. ಈ ನಿಯಮವನ್ನು 5000 ರೂ.ಬೆಲೆಯ ರಿಕರಿಂಗ್ ವಹಿವಾಟಿಗೆ ಅನ್ವಯಿಸಲಾಗಿದೆ. ಈ ಮಿತಿಗಿಂತ ಹೆಚ್ಚಿನ ವಹಿವಾಟಿಗೆ ಒನ್ ‌ಟೈಮ್ ಪಾಸ್‌ ವರ್ಡ್ (ಒಟಿಪಿ) ಅಗತ್ಯವಿರುತ್ತದೆ.

ಬ್ಯಾಂಕುಗಳು ಮೊದಲ ಪಾವತಿ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮೊದಲು ನೋಟಿಫಿಕೇಶನ್ ಕಳುಹಿಸಬೇಕಾಗುತ್ತದೆ. ಗ್ರಾಹಕರು ಅದನ್ನು ಅನುಮೋದಿಸಿದಾಗ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ. ಒಂದು ವೇಳೆ ಪಾವತಿ 5000 ರೂ.ಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ಗ್ರಾಹಕರಿಗೆ ಒಟಿಪಿ (OTP) ಕಳುಹಿಸಬೇಕಾಗುತ್ತದೆ.

driving
- Advertisement -

Related news

error: Content is protected !!