Saturday, April 20, 2024
spot_imgspot_img
spot_imgspot_img

ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮುಂದಿನ ವಾರ ಲಭ್ಯ ಸಾಧ್ಯತೆ: ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ನವದೆಹಲಿ: ರಷ್ಯಾದ ಗಮಲೇಯ ರಾಷ್ಟ್ರೀಯ ಕೇಂದ್ರವು ಅಭಿವೃದ್ಧಿಪಡಿಸಿದ ಕೊವಿಡ್19 ವಿರುದ್ಧದ ಲಸಿಕೆ ಸ್ಪುಟ್ನಿಕ್ ವಿ ಮುಂದಿನ ವಾರದ ಆರಂಭದಲ್ಲಿ ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ದೇಶದ ಕೋವಿಡ್ -19 ಪರಿಸ್ಥಿತಿ ಕುರಿತು ಗುರುವಾರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್, ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡುವ ವಿಶ್ವದ ಮೊದಲ ಲಸಿಕೆ ಎಂದು ಕರೆಯಲ್ಪಡುವ ಸ್ಪುಟ್ನಿಕ್ ವಿ ಯ ಸ್ಥಳೀಯ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಹೇಳಿದರು.

ಜುಲೈನಲ್ಲಿ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಭಾರತದಲ್ಲಿ ಲಸಿಕೆ ತಯಾರಿಸಲಿದೆ. ದೇಶದ ಹೊಸ ಕೊವಿಡ್ -19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಲ್ಲಿ ಸ್ಪುಟ್ನಿಕ್ ವಿಗೆ ಏಪ್ರಿಲ್‌ನಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ನೀಡಿತ್ತು. ಭಾರತದಲ್ಲಿ ನೀಡಲಿರುವ ಮೂರನೇ ಲಸಿಕೆ ಇದಾಗಿದೆ. ಇತರ ಎರಡು ಲಸಿಕೆಗಳು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್.

ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಆಕ್ಸ್‌ಫರ್ಡ್ ಯೂನಿವರ್ಸಿಟಿ-ಅಸ್ಟ್ರಾಜೆನೆಕಾ ಲಸಿಕೆ ಕೋವಿಶೀಲ್ಡ್ ಅನ್ನು ತಯಾರಿಸುತ್ತದೆ. ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ.

ಕಳೆದ ವರ್ಷ ಆಗಸ್ಟ್ 11 ರಂದು ರಷ್ಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಮೊದಲು ಅನುಮೋದನೆ ನೀಡಲಾಯಿತು. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದಂತೆ ಇದು ಶೇ 91.6 ನಷ್ಟು ಪರಿಣಾಮಕಾರಿತ್ವ ಹೊಂದಿದೆ. 50 ಕ್ಕೂ ಹೆಚ್ಚು ದೇಶಗಳಲ್ಲಿ ಸಾಮೂಹಿಕ ಬಳಕೆಗಾಗಿ ಅನುಮೋದಿಸಲಾಗಿದೆ. ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಭಾರತದಲ್ಲಿ 750 ದಶಲಕ್ಷ ಡೋಸ್ ಸ್ಪುಟ್ನಿಕ್ ವಿ ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.

ಡಿಸಿಜಿಐ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡಕ್ಕೂ ಅನುಮತಿ ಘೋಷಿಸಿದ ಎರಡು ವಾರಗಳ ನಂತರ ಕೋವಿಡ್ -19 ವಿರುದ್ಧ ಭಾರತದ ವ್ಯಾಕ್ಸಿನೇಷನ್ ಡ್ರೈವ್ ಜನವರಿ 16 ರಂದು ಪ್ರಾರಂಭವಾಯಿತು, ಪ್ರಸ್ತುತ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಮೇ 1 ರಿಂದ ಲಸಿಕೆಗೆ ಅರ್ಹರಾಗಿದ್ದರಿಂದ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯ ಮೂರನೇ ಹಂತವು ನಡೆಯುತ್ತಿದೆ.

ಆರೋಗ್ಯ ಸಚಿವಾಲಯದ ಪ್ರಕಾರ ಗುರುವಾರ ಬೆಳಿಗ್ಗೆ, ದೇಶಾದ್ಯಂತ ಇಲ್ಲಿಯವರೆಗೆ 177,214,256 ಡೋಸ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ.ಕಳೆದ 24 ಗಂಟೆಗಳಲ್ಲಿ 1,894,991 ಡೋಸ್ ಲಸಿಕೆ ವಿತರಣೆ ಆಗಿದೆ.

driving
- Advertisement -

Related news

error: Content is protected !!