- Advertisement -
- Advertisement -



ಉಪ್ಪಿನಂಗಡಿ: ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಸಮೀಪದ ಎಡ್ತಿಲ್ಲ ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನೆಲ್ಯಾಡಿ ಸಮೀಪದ ಬರೆಗುಡ್ಡೆ ನಿವಾಸಿ ವಿಜೇಶ್ ಎ. (43) ಎಂದು ಗುರುತಿಸಲಾಗಿದೆ.
ಪ್ರತಿ ದಿನದಂತೆ ಮಂಗಳವಾರ ಬೆಳಗ್ಗೆ ಎಲ್ಲ ಮಣ್ಣಗುಂಡಿ ಬಳಿಯ ತಮ್ಮ ತೋಟಕ್ಕೆ ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ. ತೋಟದಲ್ಲಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಇವರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
- Advertisement -








