Tuesday, June 23, 2026
spot_imgspot_img
spot_imgspot_img

ಉಪ್ಪಿನಂಗಡಿ: ಮನೆಯಿಂದ ಹೊರ ಹೋದ ವೃದ್ಧ ವಾಪಾಸು ಬಾರದೇ ನಾಪತ್ತೆ..!

- Advertisement -
- Advertisement -

ಉಪ್ಪಿನಂಗಡಿ: ಮನೆಯಿಂದ ಹೊರಗೆ ಹೋದ ವೃದ್ಧ ವಾಪಾಸು ಬಾರದೇ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ನಾಪತ್ತೆಯಾದ ವೃದ್ಧನನ್ನು ಬಟ್ಯಪ್ಪ ಕುಲಾಲ್ (88) ಎಂದು ಗುರುತಿಸಲಾಗಿದೆ.

ಬಟ್ಯಪ್ಪ ಕುಲಾಲ್‌ ಅವರು ಜು.25ರಂದು ಸುಮಾರು 11 ಗಂಟೆಯ ನಂತರ ಕಾಣೆಯಾಗಿದ್ದಾರೆ. ಇವರು ಬಿಳಿ ಬಣ್ಣದ ಅಂಗಿ, ಬಿಳಿ ಬಣ್ಣದ ಪಂಚೆ ಹಾಗೂ ಕೆಂಪು ಬಣ್ಣದ ಶಾಲು ಧರಿಸಿದ್ದಾರೆ. ತುಳು ಭಾಷೆಯನ್ನು ಬಲ್ಲವರಾಗಿದ್ದು ಮೂಲತಃ ಪುತ್ತೂರು ತಾಲೂಕಿನ ಪಡೂರು ಗ್ರಾಮದವರಾಗಿದ್ದಾರೆ. ಉಪ್ಪಿನಂಗಡಿಯಿಂದ ಬಸ್ ಇಳಿದು ಹೋಗುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇವರ ಸುಳಿವು ಎಲ್ಲಾದರೂ ಪತ್ತೆಯಾದರೆ 9964038573 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

- Advertisement -

Related news

error: Content is protected !!