




ಉಪ್ಪಿನಂಗಡಿ: ಮಾದಕವಸ್ತು ಸೇವನೆ ಹಾಗೂ ಮಾರಾಟ ಪ್ರಕರಣದ ಮೂವರು ಆರೋಪಿಗಳಿಗೆ ಕಲಂ 27(B) ಅಡಿಯಲ್ಲಿ ರೂ 10000 ದಂಡ ಮತ್ತು ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
ಶಿಕ್ಷೆಗೊಳಗಾದ ಆರೋಪಿಗಳನ್ನು A1 ಸಲೀಂ ಹುಸೇನ್, A2 ಶಹಜ್ ಅಹಮದ್, A3 ಮಹಮದ್ ಶಾಫಿ ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ. ಕ್ರ:120/2023 ಕಲಂ 27(B)&20(b)(ii)(A) NDPS ACT ಪ್ರಕರಣದಲ್ಲಿ, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿದ್ದ ರಾಜೇಶ್ ರವರು ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಪ್ರಕರಣದ ಆರೋಪಿಗಳಾದ A1 ಸಲೀಂ ಹುಸೇನ್, A2 ಶಹಜ್ ಅಹಮದ್, A3 ಮಹಮದ್ ಶಾಫಿ ಎಂಬವರ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಮಾನ್ಯ ಪಿ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಬೆಳ್ತಂಗಡಿ ರವರು ವಿಚಾರಣೆ ನಡೆಸಿ, ಆರೋಪಿಗಳ ಮೇಲಿನ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ, ಕಲಂ 27(B) ಅಡಿಯಲ್ಲಿ ರೂ 10000 ದಂಡ ಮತ್ತು ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
ಕಲಂ 20(B)(ii)(A) ಅಡಿಯಲ್ಲಿ 10000, ರೂಪಾಯಿ ದಂಡ ಮತ್ತು ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ನೀಡಿ ಅದೇಶಿಸಿರುತ್ತದೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕರಾದ ದಿವ್ಯರಾಜ ಹೆಗ್ಡೆರವರು ವಾದ ಮಂಡಿಸಿರುತ್ತಾರೆ.








