Thursday, May 2, 2024
spot_imgspot_img
spot_imgspot_img

ಉಪ್ಪಿನಂಗಡಿ: ತಡರಾತ್ರಿ ಅನ್ಯಕೋಮಿನ ಯುವಕ-ಯುವತಿಯರ ಜೊತೆ ಹಿಂದೂ ಯುವತಿಯ ಮೋಜು-ಮಸ್ತಿ; ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ ಕಾರ್ಯಕರ್ತರು

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಮುಸ್ಲಿಂ ಯುವತಿ ಮತ್ತು ನಾಲ್ವರು ಯುವಕರು ಜೊತೆ ಸೇರಿ ಹಿಂದೂ ಯುವತಿಯು ಮೋಜು ಮಸ್ತಿ ತೊಡಗಿದ್ದ ಘಟನೆ ಪೆರ್ನೆ ಬಿಳಿಯೂರು ಡ್ಯಾಮ್‌ ಬಳಿ ರಾತ್ರಿ ವೇಳೆ ನಡೆದಿದೆ.

ಓರ್ವ ಹಿಂದೂ ಯುವತಿ ಹಾಗೂ ಓರ್ವ ಮುಸ್ಲಿಂ ಯುವತಿ ಮತ್ತು ನಾಲ್ಕು ಮುಸ್ಲಿಂ ಯುವಕರು ಬಿಳಿಯೂರು ಡ್ಯಾಮ್‌ ಬಳಿ ಮೋಜು-ಮಸ್ತಿ ಮಾಡುತ್ತಿದ್ದು , ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ, ಯುವಕರು ಮತ್ತು ಯುವತಿಯರನ್ನು ಉಪ್ಪಿ ನಂಗಡಿ ಪೊಲೀಸರಿಗೊಪ್ಪಿ ಸಿದ್ದಾರೆ ಎಂದು ತಿಳಿದುಬಂದಿದೆ.

ಮೂರು ಆಕ್ಟೀವಾ, ಒಂದು ಬೈಕ್‌ ಮತ್ತು ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಮುಸ್ಲಿಂ ಯುವಕರನ್ನು ಮಂಗಳೂರು ಮೂಲದವರು, ಇನ್ನೋರ್ವ ಯುವಕನನ್ನು ಪೆರ್ನೆ ಮೂಲದವನು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!