Saturday, June 13, 2026
spot_imgspot_img
spot_imgspot_img

ಮೀನು ಹಿಡಿಯುವ ವಿಚಾರದಲ್ಲಿ ಗಲಾಟೆ; ಓರ್ವ ಯುವಕನ ಕೊಲೆ, ಮತ್ತೋರ್ವ ಗಂಭೀರ…!

- Advertisement -
- Advertisement -

ಮೀನು ಹಿಡಿಯುವ ವಿಚಾರದಲ್ಲಿ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಕುರಿತುನ್ಯಾಯ ಪಂಚಾಯಿತಿ ವೇಳೆ ಚಾಕುವಿನಿಂದ ಇರಿದು ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಯುವಕ ಲೋಕೇಶ್ ಮತ್ತೋರ್ವ ಗಂಭೀರ ಗಾಯಗೊಂಡವನು ದರ್ಶನ್‌ ಎಂದು ಗುರುತಿಸಲಾಗಿದೆ.

ಟೇಕಲ್‌ನ ಈಶ್ವರ ಕೆರೆಯಲ್ಲಿ ಮೀನು ಹಿಡಿಯುವಾಗ ಗಲಾಟೆ ನಡೆದಿತ್ತು. ಈ ಹಿನ್ನಲೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲಾಗುತ್ತಿತ್ತು. ಈ ವೇಳೆ ಸಹೋದರ ಸಂಬಂಧಿ ಪ್ರಮೋದ್ ಎಂಬಾತ ರೊಚ್ಚಿಗೆದ್ದು ಚಾಕುವಿನಿಂದ ತಿವಿದಿದ್ದಾನೆ.ಪರಿಣಾಮ ಓರ್ವ ಮೃತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯಗೊಂಡಿದ್ದು, ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Related news

error: Content is protected !!