Monday, June 15, 2026
spot_imgspot_img
spot_imgspot_img

ಉರಿಮಜಲು: ಇಡ್ಕಿದು ಸೇವಾ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಂಘವು 2023-24 ನೇ ಸಾಲಿನಲ್ಲಿ 2 ಕೋಟಿ ಲಾಭಾಂಶದೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ: ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು

ಉರಿಮಜಲು: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ನಂಬ್ರ 3628 ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕೇಂದ್ರ ಕಛೇರಿ “ಶತಾಮೃತ’ ಉರಿಮಜಲಿನಲ್ಲಿ ನಡೆಯಿತು.

ಇಡ್ಕಿದು ಮತ್ತು ಕುಳ ಗ್ರಾಮದ ವ್ಯಾಪ್ತಿಯನ್ನು ಹೊಂದಿರುವ ಈ ಸಂಘ 1919 ರಲ್ಲಿ ಸ್ಥಾಪನೆಗೊಂಡು 105 ವರ್ಷಗಳಿಂದ ಸುದೀರ್ಘ ಸೇವೆ ಗೈಯುತ್ತಾ ಎರಡು ಗ್ರಾಮಗಳ ಸಮಾಜ ಬಾಂಧವರ ಉನ್ನತಿಗಾಗಿ ದುಡಿಯುತ್ತಾ ಬಂದಿದೆ. ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಅಭಿವೃ‌ದ್ಧಿಯ ಮೂಲಮಂತ್ರವನ್ನು ಪ್ರತಿಯೊಂದು ಹಂತದಲ್ಲಿ ಸಾಧನೆ ಗೈಯುತ್ತಾ ಬಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸದಸ್ಯರಿಗೆ ಗ್ರಾಹಕರಿಗೆ ಉತ್ಕ್ರಷ್ಟ ಬ್ಯಾಂಕಿಂಗ್‌ ಸೇವೆಯನ್ನು ನೀಡುತ್ತಾ ಉನ್ನತ ಯಶಸನ್ನು ಪಡೆದಿರುವ ಕೀರ್ತಿ ಇಡ್ಕಿದು ಸೇವಾ ಸಹಕಾರಿ ಸಂಘದಾಗಿದೆ.

ಸಂಘವು ಇಡ್ಕಿದು ಗ್ರಾಮದ ಉರಿಮಜಲಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದ್ದು, ಮಿತ್ತೂರು, ಸೂರ್ಯ, ಕುಳ, ಅಡ್ಯಾಲುಕರೆ ಎಂಬಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ವಿಶಾಲ ಕಾರ್ಯವ್ಯಾಪ್ತಿಯನ್ನು ಒಳಗೊಂಡಿದೆ.

ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರು ರಾಮ್‌ ಭಟ್‌ ನೀರಪಳಿಕೆ, ಸಂಘದ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್‌, ಹಾಗೂ ಸಂಘದ ನಿರ್ದೇಶಕರುಗಳಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್‌ ಕೊಪ್ಪಳ, ಜಯಂತ ಡಿ, ಸುಂದರ ಪಿ, ಶಿವಪ್ರಕಾಶ್‌ ಕೆ ವಿ, ಜನಾರ್ಧನ ಪೂಜಾರಿ ಕಾರ್ಯಡಿ, ವಸಂತ ಉರಿಮಜಲು, ಶೇಖರ ನಾಯ್ಕ, ಶ್ರೀಮತಿ ನಳಿನಿ, ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ರತ್ನಾ ಸೇಕೆಹಿತ್ಲು, ಗೋಪಾಲಕೃಷ್ಣ ಭಟ್‌ ಎಂ ಪಡೀಲ್‌ ಮೈಕೆ, ಉಪಸ್ಥಿತರಿದ್ದರು.

ಇಡ್ಕಿದು ಸೇವಾ ಸಹಕಾರಿ ಸಂಘವು 2023-24 ನೇ ಸಾಲಿನಲ್ಲಿ 2,12,90,450.51 (ಎರಡು ಕೋಟಿ, ಹನ್ನಡರು ಲಕ್ಷದ ತೊಂಭತ್ತು ಸಾವಿರದ ನಾಲ್ನೂರ ಐವತ್ತು ಪಾಯಿಂಟ್‌ ಐದು ಒಂದು) ಲಾಭಾಂಶದೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷರು ಸುಧಾಕರ ಶೆಟ್ಟಿ ಬೀಡಿನಮಜಲು ಸಭೆಯಲ್ಲಿ ಘೋಷಿಸಿದರು.

ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಇಡ್ಕಿದು ಮತ್ತು ಕುಳ ಗ್ರಾಮದ ಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಹಾಗೂ ವಿಶೇಷ ಚೇತನ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಎರಡು ಗ್ರಾಮಗಳ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ 2023-24 ನೇ ಸಾಲಿನಲ್ಲಿ ಸಂಘದ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ಮಾಡಿದವರನ್ನು, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಡ್ಕಿದು ಮತ್ತು ಕುಳ ಗ್ರಾಮದ ಆರೋಗ್ಯ ಇಲಾಖೆಗಳಲ್ಲಿ ಸೇವೆ ಗೈಯುತ್ತಿರುವ ಆರೋಗ್ಯ ಸಿಬ್ಬಂದಿಗಳನ್ನು ಹಾಗೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಎರಡು ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಸ್ವಸಹಾಯ ಸಂಘದ ಪ್ರೇರಕಿ ಶ್ರೀಮತಿ ಯಶೋಧಾರವರನ್ನು ಗೌರವಿಸಲಾಯಿತು.
ಹಾಗೂ ನಾಟಿ ವೈದ್ಯರನ್ನು ಹಾಗೂ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ ಹಲವರನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯಲ್ಲಿ ಹಲವು ಸಂಘದ ವಿಚಾರಗಳ ಬಗ್ಗೆ ಸಂವಾದ ನಡೆಯಿತು. ಸೊಸೈಟಿ ಸಿಬ್ಬಂಧಿ ರತ್ನಾವತಿ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಸ್ವಾಗತಿಸಿದರು. ಉಪಾಧ್ಯಕ್ಷ ರಾಮ್‌ ಭಟ್‌ ನೀರಪಳಿಕೆ ವಂದಿಸಿದರು. ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರು, ಊರಾಭಿಮಾನಿಗಳು, ಸಂಘಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!