Thursday, July 23, 2026
spot_imgspot_img
spot_imgspot_img

ಮುರುಡೇಶ್ವರದ ಬಳಿ ಮೀನುಗಾರಿಕಾ ಬೋಟ್​ ಪಲ್ಟಿ..!

- Advertisement -
- Advertisement -

ಕಾರವಾರ: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್​ ಮುರ್ಡೇಶ್ವರದ ಬಳಿ ಪಲ್ಟಿಯಾಗಿದೆ. ಜನಾರ್ಧನ್​ ಪುರ್ಸು ಹರಿಕಾಂತ ಗದ್ದೆಮನೆ ಎಂಬುವರಿಗೆ ಸೇರಿದ ಬೋಟ್ ಇದಾಗಿದ್ದು, ಇಂದು ಬೆಳಗ್ಗೆ ಮೀನುಗಾರಿಕೆ ತೆರಳಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದ ಬಳಿ ಪಲ್ಟಿಯಾಗಿದೆ.

ಇಂದೂ ಸಹ ಉತ್ತರ ಕನ್ನಡ, ಕರಾವಳಿ ಕಡೆಗಳಲ್ಲಿ ಮಳೆ ಮುಂದುವರಿದಿದೆ. ಹೀಗಿದ್ದಾಗ್ಯೂ ಮೀನುಗಾರರು ಸಹಜವೆಂಬಂತೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯುತ್ತಲೇ ಇದ್ದಾರೆ. ಅದರಂತೆ ಇಂದು ಹರಿಕಾಂತ ಗದ್ದೆಮನೆಯವರ ಜಲಗಂಗಾ ಎಂಬ ಹೆಸರಿನ ಬೋಟ್​​ ಮೀನುಗಾರಿಕೆಗೆ ಹೋಗಿತ್ತು. ಅದು ಪಲ್ಟಿಯಾಗಿ ಆತಂಕ ಮೂಡಿಸಿತ್ತು. ಅದರಲ್ಲಿದ್ದ ಏಳೂ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!