Friday, April 19, 2024
spot_imgspot_img
spot_imgspot_img

ಉತ್ತರಪ್ರದೇಶದಲ್ಲಿ 24 ಗಂಟೆಯಲ್ಲಿ 23ಆರೋಪಿಗಳಿಗೆ ಜೀವಾವಧಿ ಶಿಕ್ಷೆ-“ಮಿಷನ್ ಶಕ್ತಿ”ಯ ಶಕ್ತಿ ಹೆಚ್ಚಿಸಿದ ನೂತನ ಕ್ರಮ

- Advertisement -G L Acharya panikkar
- Advertisement -

ಉತ್ತರಪ್ರದೇಶ: ಮಹಿಳೆಯರು ಮತ್ತು ಯುವತಿಯರ ವಿರುದ್ಧ ಪೈಶಾಚಿಕ ಕೃತ್ಯದಲ್ಲಿ ಶಾಮೀಲಾಗುವವರಿಗೆ ಉತ್ತರಪ್ರದೇಶ ಸರ್ಕಾರ ಕಟು ಸಂದೇಶವನ್ನು ರವಾನಿಸಿದ್ದು, ಕಳೆದ 24ಗಂಟೆಯಲ್ಲಿ 23 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ರಾಜ್ಯಾದ್ಯಂತ ಮಹಿಳೆಯರು ಮತ್ತು ಯುವತಿಯರ ಮೇಲೆ ನಡೆಯುವ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಇತ್ತೀಚೆಗಷ್ಟೇ “ಮಿಷನ್ ಶಕ್ತಿ” ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಈ ನೂತನ ಕ್ರಮದಿಂದ ಹೊಸದಾಗಿ ಜಾರಿಯಾಗಿದ್ದ ಮಿಷನ್ ಗೆ ದೊಡ್ಡ ಉತ್ತೇಜನ ಸಿಕ್ಕಂತಾಗಿದೆ ಎಂದು ವರದಿ ವಿವರಿಸಿದೆ.
ಉತ್ತರಪ್ರದೇಶ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, 49 ಪ್ರಕರಣಗಳಲ್ಲಿ ಜಾಮೀನು ರದ್ದುಗೊಳಿಸಲಾಗಿದ್ದು. 28 ಕ್ರಿಮಿನಲ್ಸ್ ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದೆ.

ಮಹಿಳೆಯರ ವಿರುದ್ಧ ಅಪರಾಧ ಕೃತ್ಯ ಎಸಗಿದ್ದ 23 ಆರೋಪಿಗಳ ವಿರುದ್ಧ ಅಕ್ಟೋಬರ್ 19 ಮತ್ತು ಅಕ್ಟೋಬರ್ 20ರ ನಡುವಿನ ಕೇವಲ 24ಗಂಟೆಯೊಳಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ದೊಡ್ಡ ಯಶಸ್ಸು ಸಾಧಿಸಲಾಗಿದೆ ಎಂದು ಎಡಿಜಿ ಅಶುತೋಷ್ ಪಾಂಡೆ ತಿಳಿಸಿದ್ದಾರೆ.ಅಪರಾಧ ಕೃತ್ಯ ಎಸಗಿದ್ದ 31 ಆರೋಪಿಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ ಎಂದು ವರದಿ ಹೇಳಿದೆ.ಕಳೆದ ಒಂದು ವರ್ಷದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಸಗಿದ್ದ 11 ಪ್ರಕರಣಗಳಲ್ಲಿನ 14 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ವಿವರಿಸಿದೆ.

- Advertisement -

Related news

error: Content is protected !!