Friday, April 19, 2024
spot_imgspot_img
spot_imgspot_img

ಉತ್ತರಪ್ರದೇಶದ ದಲಿತ ಯುವತಿ ಅತ್ಯಾಚಾರ ಖ‌ಂಡಿಸಿ ಅ.12ರಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದಿಂದ ಧರಣಿ ಸತ್ಯಾಗ್ರಹ

- Advertisement -G L Acharya panikkar
- Advertisement -

ಪುತ್ತೂರು: ಉತ್ತರ ಪ್ರದೇಶ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದಿಂದ ಅ.12ರಂದು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆ ಬಳಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಅಧ್ಯಕ್ಷ ರಾಮಣ್ಣ ತಿಳಿಸಿದ್ದಾರೆ.


ಅ.8ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಘನ ಘೋರ ಘಟನೆ ನಡೆದಿದ್ದು ಯೋಗಿ ಆದಿತ್ಯನಾಥ್ ಸರ್ಕಾರ 14 ದಿನ ಕಳೆದರು ಕೇಸು ದಾಖಲಿಸದೆ ಸಾಕ್ಷಿ ನಾಶಕ್ಕೆ ಹೊರಟಿರುವುದು ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಯೋಗಿ ಆದಿತ್ಯನಾಥರವರ ಸಂವಿಧಾನ ವಿರೋಧಿ ನೀತಿಯು ಉತ್ತರ ಕೋರಿಯಾದ ಕಿಂಗ್ ಜಾನ್‌ಗಿಂತಲೂ ಹೀನಾಯವಾಗಿದೆ. ಅಲ್ಲಿ ಮಾಧ್ಯಮದವರನ್ನು ಕಟ್ಟಿ ಹಾಕಿ ದಲಿತ ಯುವತಿ ಮನೆಯಲ್ಲಿರುವ ದಾಖಲೆ ಯನ್ನು ನಾಶ ಪಡಿಸಿರುವುದು ದುರಂತವೇ ಆಗಿದೆ. ರಾಮರಾಜ್ಯದಲ್ಲಿ ಇಂತಹ ಘಟನೆ ನಡೆದರೂ ಹಿಂದೂ ಪರ ಸಂಘಟನೆಗಳು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದರು.


ಮೃತದೇಹವನ್ನು ಹಸ್ತಾಂತರಿಸುವಂತೆ ಸಂತ್ರಸ್ಥರು ಪರಿಪರಿಯಾಗಿ ಕೇಳಿಕೊಂಡರೂ ಶೋಷಕರಿಗೆ ಒಪ್ಪಿಸದೆ ಅಲ್ಲಿನ ಪೊಲೀಸರು ರಾತ್ರಿ 3 ಗಂಟೆಗೆ ಮೃತದೇಹವನ್ನು ಸುಟ್ಟು ಹಾಕಿರುವುದನ್ನು ಗಮನಿಸಿದರೆ ಅವರು ಆರೋಪಿಗಳ ಪರ ನಿಂತಿರುವುದಾಗಿ ಅನುಮಾನಗಳು ಕಾಡುತ್ತಿದೆ. ಅಲ್ಲದೆ ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ನೊಂದ ಈ ಸಂತ್ರಸ್ತ ಕುಟುಂಬ ಭಯದ ವಾತಾವರಣದಲ್ಲಿ ಬದುಕು ದುರಂತವಾಗಿದೆ. ಈ ಕುಟುಂಬಕ್ಕೆ ಕೇಂದ್ರ ಮಟ್ಟದ ಭದ್ರತೆಯನ್ನು ಒದಗಿಸುವಂತೆ ಹಾಗೂ ಸಂವಿಧಾನ ವಿರೋಧಿ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ ಸಂತ್ರಸ್ತೆಯ ಕುಟುಂಬಸ್ಥರು ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.


ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯ ಡಾ.ರಘು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ, ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇರಿ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ, ತಾಲೂಕು ವಿವಿಧ ಘಟಕಗಳ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗೂ ಮಾಜಿ ಅಧ್ಯಕ್ಷರು, ಸದಸ್ಯ, ವಲಯ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಮಹಿಳಾ ಘಟಕಗಳು ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡ ಸೇಸಪ್ಪ‌ ನೆಕ್ಕಿಲು ಹಾಗೂ ಕಾರ್ಯಕರ್ತ ಕೇಶವ ಪಡೀಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!