Tuesday, July 1, 2025
spot_imgspot_img
spot_imgspot_img

ಉತ್ತರ ಪ್ರದೇಶ: ಭಾನುವಾರ ಲಾಕ್‌ಡೌನ್; ಮಾಸ್ಕ್ ಧರಿಸದಿದ್ದರೆ 10 ಸಾವಿರವರೆಗೆ ದಂಡ!

- Advertisement -
- Advertisement -

ಲಖನೌ: ಉತ್ತರ ಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಭಾನುವಾರ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

driving

ಕೊರೊನಾ ಹರಡದಂತೆ ತಡೆಯಲು ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಉತ್ತರ ಪ್ರದೇಶ ಸರ್ಕಾರ, ಮಾಸ್ಕ್ ಧರಿಸದೇ ಮೊದಲ ಬಾರಿಗೆ ಸಿಕ್ಕಿಬಿದ್ದವರಿಗೆ, 1,000ರೂ.ದಂಡ ಮತ್ತು ಎರಡನೇ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ 10 ಪಟ್ಟು ದಂಡ ವಿಧಿಸುವ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಭಾನುವಾರ ಲಾಕ್‌ಡೌನ್ಮಾ ಡಲಾಗುವುದು. ಈ ಅವಧಿಯಲ್ಲಿ ನೈರ್ಮಲ್ಯೀಕರಣ ಮತ್ತು ತುರ್ತು ಸೇವೆಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಈ ನಿಟ್ಟಿನಲ್ಲಿ ಜನರಿಗೆ ಅಗತ್ಯ ಜಾಗೃತಿ ಮೂಡಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.


‘ಯಾರಾದರೂ ಮಾಸ್ಕ್ ಹಾಕಿಕೊಳ್ಳದೆ ಮೊದಲ ಬಾರಿಗೆ ಸಿಕ್ಕಿಹಾಕಿಕೊಂಡರೆ, 1,000ರೂ.ಗಳ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಹತ್ತು ಪಟ್ಟು ದಂಡ ವಿಧಿಸಬೇಕು” ಎಂದು ಅವರು ಹೇಳಿದ್ಧಾರೆ.

ಉತ್ತರ ಪ್ರದೇಶದಲ್ಲಿ ಗುರುವಾರ ಕೋವಿಡ್‌ನಿಂದ 104 ಮಂದಿ ಮೃತಪಟ್ಟಿದ್ದು, 22,439 ಹೊಸ ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ರಾಜ್ಯದಲ್ಲಿ, ಈವರೆಗೆ ಒಟ್ಟು ಸಾವಿನ ಸಂಖ್ಯೆ 9,480 ಕ್ಕೆ ಏರಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 7,66,360 ಕ್ಕೆ ತಲುಪಿದೆ.

ಕಳೆದ ವರ್ಷದ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಕೊರೊನಾ ವೈರಸ್ ಹರಡುವಿಕೆ ತಡೆಯುವ ಕೆಲಸದಲ್ಲಿ ಬಳಕೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದು, ಈ ವರ್ಷವೂ ನಿಯಮಗಳ ಪ್ರಕಾರ, ಶಾಸಕರ ಶಿಫಾರಸಿನ ಮೇರೆಗೆ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಬಹುದು ಎಂದಿದ್ದಾರೆ.

- Advertisement -

Related news

error: Content is protected !!