Sunday, June 7, 2026
spot_imgspot_img
spot_imgspot_img

ಸರ್ಕಾರಿ ಕಚೇರಿಗೆ ಕಳ್ಳರ ಲಗ್ಗೆ ಅತ್ಯಮೂಲ್ಯ ದಾಖಲೆಗಳು ಮಾಯ.!

- Advertisement -
- Advertisement -

ಸರ್ಕಾರಿ ಕಚೇರಿಗೆ ನುಗ್ಗಿದ ಕಳ್ಳರು ಅತ್ಯಮೂಲ್ಯ ದಾಖಲೆಗಳನ್ನು ಖದೀಮರು ಕೊಂಡೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ಶೇಖರಿಸಿ ಇಟ್ಟಿದ್ದ ದಾಖಲೆಗಳು ಕಳ್ಳರ ಪಾಲಾಗಿದ್ದು ,ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿಂದಲೂ ಅಧಿಕಾರಿಗಳು ಶೇಖರಿಸಿಡುತ್ತಿದ್ದರು ಎನ್ನಲಾಗಿದೆ.

ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!