Wednesday, April 24, 2024
spot_imgspot_img
spot_imgspot_img

ವಿಟ್ಲ: ಮಜಿ ವೀರಕಂಭ ಶಾಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವೀರಕಂಭ: ವಿಶ್ವದ ಅತಿ ದೊಡ್ಡ ಉಚಿತ ಲಸಿಕ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭದಲ್ಲಿ ದ.ಕ.ಜಿ.ಪಂ., ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಹಾಗೂ ಗ್ರಾಮ ಪಂಚಾಯತ್ ವೀರಕಂಬ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ವೀರಕಂಭ ಇದರ ಸಹಯೋಗದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ನಡೆದ ಕೋವಿಡ್ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ವ್ಯಾಪ್ತಿಯ 239 ಮಂದಿ ಲಸಿಕೆ ಪಡೆದುಕೊಂಡರು. ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಇಂದಿರಾ ನಾಯ್ಕ, ಕಿರಿಯ ಆರೋಗ್ಯ ಸಹಾಯಕಿಯರಾದ ಜ್ಯೋತಿ ಕೆ ಎನ್, ಸೌಮ್ಯ ಪಿ, ವೆರೋನಿಕಾ ರೋಡ್ರಿಗಸ್ ,ಕೀತಿ೯ ಕೆ ಎನ್, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯರಾದ ಮೀನಾಕ್ಷಿ, ಜಯಂತಿ ಜನಾರ್ಧನ, ಗೀತಾಜಯಶೀಲ ಗಾಂಭೀರ್, ಜಯಪ್ರಸಾದ್, ಸಂದೀಪ್, ಆಶಾ ಕಾಯ೯ಕತೆ೯ಯರಾದ ಲೀಲಾವತಿ, ಕೋಮಲಾಕ್ಷಿ, ಸ್ನೇಹಲತಾ,
ಶಶಿಕಲಾ, ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ನಾರಾಯಣ ಪೂಜಾರಿ, ಎಸ್ ಕೆ ತಿಮ್ಮಪ್ಪ ನಾಯ್ಕ, ಶ್ರೀಮತಿ ಸಂಗೀತ ಶರ್ಮ ಉಪಸ್ಥಿತರಿದ್ದರು.

- Advertisement -

Related news

error: Content is protected !!