Thursday, April 18, 2024
spot_imgspot_img
spot_imgspot_img

ವೀರಕಂಭ: ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಮಜಿ ಶಾಲೆಗೆ ಕ್ರೀಡಾಸಾಮಾಗ್ರಿ ,ಬೆಂಚುಡಸ್ಕ್ ಗಳ ಹಸ್ತಾಂತರ

- Advertisement -G L Acharya panikkar
- Advertisement -

ವೀರಕಂಭ: ವಿಧ್ಯಾರ್ಥಿಗಳು ಕೇವಲ ಪಠ್ಯ ಸಂಬಂಧಿತ ಕಲಿಕೆ ಮಾತ್ರ ಅಲ್ಲದೆ ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಂಡಾಗ ಹೆಚ್ಚು ಕ್ರಿಯಾಶೀಲರಾಗಿ ಇರುತ್ತಾರೆ. ಆ ಕಾರಣದಿಂದಾಗಿ ಶಾಲೆಗಳಿಗೆ ಕ್ರೀಡಾ ಸಲಕರಣೆಗಳನ್ನು ಒದಗಿಸುವುದು ತುಂಬಾ ಅಗತ್ಯವಿದೆ.

ಕ್ರೀಡೆಗಳಲ್ಲಿ ಮಕ್ಕಳಿಗೆ ಆಸಕ್ತಿ ಒದಗಿಸುವುದರಿಂದ ಅವರಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಇದರಿಂದ ಬದುಕುವ ಕಲೆಯನ್ನು ರೂಢಿಸಿಕೊಳ್ಳಲು ಸಾಧ್ಯ ಎಂದು ಮಾಣಿ ಕ್ಷೇತ್ರದ ಜಿ.ಪಂ.ಸದಸ್ಯೆ ಮಂಜುಳಾ ಮಾವೆಯವರು ಮಜಿ ವೀರಕಂಭ ಶಾಲೆಯಲ್ಲಿ ತಮ್ಮ ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಒದಗಿಸಿದ ರೂ 25000 ಮೌಲ್ಯದ ಕ್ರೀಡಾಸಾಮಾಗ್ರಿ ಹಾಗೂ ಗುರು 66000 ಮೌಲ್ಯದ ಬೆಂಚುಡಸ್ಕ್ ಗಳನ್ನು ಶಾಲೆಗೆ ಹಸ್ತಾಂತರ ಮಾಡಿ ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಮಾತನಾಡಿ ಮಂಜುಳಾ ಮಾಧವ ಮಾವೆಯವರು ತಮ್ಮ ಜಿಲ್ಲಾ ಪಂಚಾಯತ್ ಸದಸ್ಯತೆಯ ಐದು ವರ್ಷದ ಅವಧಿಯಲ್ಲಿ ಪ್ರತಿವರ್ಷವೂ ನಮ್ಮ ಶಾಲೆಗೆ ಒಂದೊಂದು ರೀತಿಯ ಅನುದಾನವನ್ನು ಒದಗಿಸಿಕೊಟ್ಟು ಮಜಿ ಶಾಲೆಯ ಅಭಿವೃದ್ಧಿಯಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಪಟ್ಟಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯೆ ಮೀನಾಕ್ಷಿ ಸುನಿಲ್, ಜಯಂತಿ ಜನಾರ್ಧನ್, ಜಯಪ್ರಸಾದ್, ಸಂದೀಪ್ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿಜಯ ಶೇಖರ್, ಸದಸ್ಯೆ ಉಮಾವತಿ ಉಮೇಶ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರ ಹಾಗೂ ಶಿಕ್ಷಕ ವೃಂದದವರು ಭಾಗವಹಿಸದ್ದರು. ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!