Friday, April 26, 2024
spot_imgspot_img
spot_imgspot_img

ಆನ್ಲೈನ್’ನಲ್ಲೇ ಬೆತ್ತಲಾಗಿ ಹೆದರಿದ ಬೆಂಗಳೂರಿನ ಟೆಕ್ಕಿ !-ಬೆದರಿಕೆಗೆ 16 ಲಕ್ಷ ಕಳೆದುಕೊಂಡ ಸಾಫ್ಟ್​ವೇರ್​ ಇಂಜಿನಿಯರ್​ !

- Advertisement -G L Acharya panikkar
- Advertisement -

ಬೆಂಗಳೂರು: ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತೇವೆ ಎಂಬ ಯುವತಿಯರ ಬೆದರಿಕೆಗೆ ಹೆದರಿದ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​ 16 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಡಿಸೆಂಬರ್​​ 3ರಂದು ಸಂತ್ರಸ್ತ ಸಾಫ್ಟ್​ವೇರ್ ಇಂಜಿನಿಯರ್ ಡೇಟಿಂಗ್​ ಅಪ್ಲಿಕೇಶನ್​ ಮೂಲಕ ಶ್ವೇತಾ ಎಂಬಾಕೆಯನ್ನು ಭೇಟಿಯಾಗಿದ್ದರು.

ಹೆಚ್ಚಿನ ಸೇವೆಗಾಗಿ ಇಂಜಿನಿಯರ್​ ಬಳಿ 2000 ರೂಪಾಯಿಯನ್ನ ಆನ್​​ಲೈನ್​ ಪೇಮೆಂಟ್​ ಮಾಡುವಂತೆ ಹೇಳಿದ್ದಳು. ಪೇಮೆಂಟ್ ಆದ ಬಳಿಕ ಶ್ವೇತಾ ಸಾಫ್ಟ್​ವೇರ್ ಇಂಜಿನಿಯರ್​ಗೆ ತನ್ನ ಗೆಳತಿ ನಿಖಿತಾ ಮೊಬೈಲ್​ ನಂಬರ್​ ನೀಡಿದ್ದಾಳೆ. ನಿಖಿತಾ ವಿಡಿಯೋ ಕಾಲ್​ ಮಾಡಿ ಇಂಜಿನಿಯರ್​ಗೆ ನಗ್ನ ದೇಹ ತೋರಿಸಿ ಕಾಲ್​ ರೆಕಾರ್ಡ್ ಮಾಡಿದ್ದಾಳೆ. ಬೆತ್ತಲಾಗುವಂತೆ ಸಾಫ್ಟ್​ವೇರ್ ಇಂಜಿನಿಯರ್’ಗೂ ಪುಸಲಾಯಿಸಿದ್ದು, ಯುವತಿಯರ ಬೇಡಿಕೆಗೆ ಮಣಿದು ಸಾಫ್ಟ್​ವೇರ್ ಇಂಜಿನಿಯರ್ ಬೆತ್ತಲಾಗಿದ್ದು, ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಿದ್ದಾರೆ. ಹಣ ಪಾವತಿ ಮಾಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್​ ಮಾಡುವುದಾಗಿ ಪ್ರೀತಿ ಅಗರ್​ವಾಲ್​ ಹಾಗೂ ಶೆರಿನ್ ಎಂಬ ಇಬ್ಬರು ಮಹಿಳೆಯರು ಬೆದರಿಕೆ ಹಾಕಿದ್ದರು ಎಂದು ಟೆಕ್ಕಿ ಹೇಳಿದ್ದಾರೆ.


ಡಿಸೆಂಬರ್​ 3 ಹಾಗೂ ಡಿಸೆಂಬರ್ 13ನೇ ತಾರೀಖಿನ ನಡುವೆ ವಿವಿಧ ಆನ್​​ಲೈನ್​ ವೇದಿಕೆಯ ಮೂಲಕ 16 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ ಅಂತಾ ಟೆಕ್ಕಿ ದೂರಿನಲ್ಲಿ ತಿಳಿಸಿದ್ದಾರೆ. ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!