Monday, July 20, 2026
spot_imgspot_img
spot_imgspot_img

ವಿಜಯನಗರ: ಆಸ್ತಿ ಕಲಹ – ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ಕೊಂದ ತಮ್ಮ

- Advertisement -
- Advertisement -

ವಿಜಯನಗರ: ಆಸ್ತಿ ಕಲಹ ಹಿನ್ನೆಲೆ ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ತಮ್ಮ ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್ (26) ಕೊಲೆಯಾದ ದುರ್ದೈವಿ. ಮರುಳಸಿದ್ದೇಶ್ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ಕೊಲೆ ಆರೋಪಿಗಳು. ಪತ್ರಿಗೌಡ ಮದ್ಯ ವ್ಯಸನಿಯಾಗಿದ್ದ ಕುಡಿತದ ಚಟಕ್ಕೆ ದಾಸನಾಗಿದ್ದ ಪತ್ರಿಗೌಡ ಆಸ್ತಿಯಲ್ಲಿ ಪಾಲು ಬೇಕು ಎಂದು ತಾಯಿ ಜೊತೆ ಕೆಲದಿನಗಳಿಂದ ಜಗಳ ಮಾಡುತ್ತಿದ್ದ. ಅಲ್ಲದೇ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಜಗಳ ಮಾಡಿದ್ದ. ಆ ಬಳಿಕ ಇಡೀ ಆಸ್ತಿ ನನಗೆ ಸೇರುತ್ತೆ ಎಂದು ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ಕೊಲೆಮಾಡಿದ್ದಾನೆ.

ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಆರೋಪಿಗಳು ಬಿಂಬಿಸಲು ಹೊರಟಿದ್ದರು. ಸಾಕ್ಷಿ ನಾಶ ಮಾಡಲು ಅಪಘಾತವಾಗಿ ಮೃತಪಟ್ಟಿದ್ದಾನೆ ಎಂದು ಆರೋಪಿಗಳು ಹೇಳಿದ್ದರು. ಮಗನ ಕೊಲೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತನ ತಾಯಿ ಕೊಲೆ ಕೇಸ್ ದಾಖಲಿಸಿದ್ದರು. ತನಿಖೆ ಕೈಗೊಂಡ ಅರಸೀಕೆರೆ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!