Monday, June 22, 2026
spot_imgspot_img
spot_imgspot_img

ಮಗಳ ಜೊತೆ ಪ್ರಿಯಕರನನ್ನು ಹತ್ಯೆಗೈದ ತಂದೆ!

- Advertisement -
- Advertisement -

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಪ್ರೇಮಿಗಳಿಬ್ಬರನ್ನು ಯುವತಿಯ ತಂದೆ ಕಲ್ಲಿನಿಂದ ಹೊಡೆದು ಹತ್ಯೆಗೈದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕೊಲೆಯಾದವರನ್ನು ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ(19) ಹಾಗೂ ಖಾನಾಪುರ ಗ್ರಾಮದ ನಿವಾಸಿ ದಾವಲನಿ ತಂಬಡ ಎಂದು ಗುರುತಿಸಲಾಗಿದೆ.

ಬಸವರಾಜ ಹಾಗೂ ದಾವಲನಿ ಇವರಿಬ್ಬರು ಸಲಾದಹಳ್ಳಿ ಹಾಗೂ ಖಾನಾಪುರದ ಅಕ್ಕಪಕ್ಕದ ಗ್ರಾಮಗಳಾಗಿದ್ದರಿಂದ ನಡುವೆ ಪರಿಚಯ ಉಂಟಾಗಿ ಪ್ರೀತಿಗೆ ತಿರುಗಿತ್ತು. ಆದರೆ ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯಲ್ಲಿ ವಿರೋಧವಿತ್ತು ಎನ್ನಲಾಗಿದೆ.

ಮಂಗಳವಾರ ಸಂಜೆ ಇವರಿಬ್ಬರು ಜಮೀನಿನಲ್ಲಿ ಭೇಟಿಯಾದ ವೇಳೆ ದಾವಲನಿಯ ತಂದೆ ಇಬ್ಬರನ್ನೂ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ ಈ ಘಟನೆಗೆ ಸಂಬಂಧಿಸಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!