Friday, March 29, 2024
spot_imgspot_img
spot_imgspot_img

ವಿಟ್ಲ ಮೂಲದ ಹೈ ಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ.

- Advertisement -G L Acharya panikkar
- Advertisement -

ವಿಟ್ಲ :ವಿಟ್ಲದ ಮೂಲದ ಬೆಂಗಳೂರಿನ ಖ್ಯಾತ ನ್ಯಾಯವಾದಿ ಆರುಣ್ ಶ್ಯಾಮ್ ರವರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

 ಕಾನೂನು ಇಲಾಖೆಯ ಸರಕಾರದ ಅಧಿನ ಕಾರ್ಯದರ್ಶಿ ಯಾಗಿರುವ ಆದಿ ನಾರಾಯಣರವರು ಸೆಪ್ಟೆಂಬರ್ 8 ರಂದು  ಈ ಆದೇಶ ಹೊರಡಿಸಿದ್ದಾರೆ .ತಕ್ಷಣದಿಂದ ಜಾರಿಗೆ ಬರುವಂತೆ ಮೂವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಅರುಣ್ ಶ್ಯಾಮ್ ಸಹಿತ ಇನ್ನು ಇಬ್ಬರು ನ್ಯಾಯವಾದಿಗಳನ್ನು ಕರ್ನಾಟಕ ಸರಕಾರ ಈ ಹುದ್ದೆಗೆ ನೇಮಕ ಮಾಡಿದೆ.  ಶ್ರೀ ವೈ ,ಎಚ್ ವಿಜಯಕುಮಾರ್,  ಮತ್ತು ಶ್ರೀ ದ್ಯಾನ್ ಚಿನ್ನಪ್ಪ ಹೆಚ್ಚುವರ ಅಡ್ವೋಕೇಟ್ ಜನರಲ್ ಆಗಿ ಆಯ್ಕೆಯಾದ  ಇತರ ಇಬ್ಬರು ನ್ಯಾಯವಾದಿಗಳು.

ಭಾರತದ ಸಂವಿಧಾನದ ಅನುಚ್ಛೇಧ 162ರ ಅನ್ವಯ ಪ್ರದತ್ತವಾದ ಅಧಿಕಾರದನ್ವಯ ನ್ಯಾಯವಾದಿಗಳನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾಗಿ ನೇಮಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಅರುಣ್ ಶ್ಯಾಮ್ ಅವರನ್ನು ಬೆಂಗಳೂರು ಪೀಠದ   ಹೆಚ್ಚುವರಿ ಅಡ್ವೋಕೇಟ್ ಜನರಲ್ -1 ಸ್ಥಾನಕ್ಕೆ ನೇಮಕ ಮಾಡಲಾಗಿದೆ . ಈ ಹಿಂದೆ ಈ ಸ್ಥಾನವನ್ನು ಅಲಂಕರಿಸಿದ್ದ ಅರ್. ನಟರಾಜ್ ರವರು ನ್ಯಾಯದೀಶರಾಗಿ ನೇಮಕವಾದ ಹಿನ್ನಲೆಯಲ್ಲಿ  ಈ ಸ್ಥಾನ ಖಾಲಿಯಾಗಿತ್ತು. 

ಮೂಲತಃ ವಿಟ್ಲದ ಕೋಡಪದವಿನ ಅರುಣ್ ಶ್ಯಾಮ್ ರವರು, ಪ್ರಾಥಮಿಕ ಶಿಕ್ಷಣವನ್ನು ವಿಟ್ಲ ಮಾದಕಟ್ಟೆಯಲ್ಲಿ.,
ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ,ಪದವಿ ಶಿಕ್ಷಣವನ್ನು ವಿಟ್ಲ ಹಾಗೂ ಪುತ್ತೂರಿನಲ್ಲಿ ಅಭ್ಯಾಸ ಮಾಡಿ ಹಾಗೂ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್ ಎಲ್.ಎಂ ಪದವಿ ಮಾಡಿರುತ್ತಾರೆ.

- Advertisement -

Related news

error: Content is protected !!