Wednesday, May 15, 2024
spot_imgspot_img
spot_imgspot_img

ವಿಟ್ಲ-ಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ, ಉಚಿತ ಆಯುಷ್ಮಾನ್ ಕಾರ್ಡ್‌ ನೋಂದಾವಣೆ ಮತ್ತು ವಿತರಣೆ ಶಿಬಿರ.

- Advertisement -G L Acharya panikkar
- Advertisement -

ವಿಟ್ಲ:– ಭಾರತೀಯ ಜನತಾ ಪಾರ್ಟಿ, ವಿಟ್ಲ-ಪಡ್ನೂರು ಶಕ್ತಿಕೇಂದ್ರ ಇದರ ನೇತ್ರತ್ವದಲ್ಲಿ  ಭಾರತ ಸರಕಾರದ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಉಚಿತ ಆಯುಷ್ಮಾನ್ ಕಾರ್ಡ್‌ ನೋಂದಾವಣೆ ಮತ್ತು ವಿತರಣೆ ಶಿಬಿರವು  ದಿನಾಂಕ 30-08-2020ನೇ ಆದಿತ್ಯವಾರ, ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ, ವಿಟ್ಲ-ಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

 ಇದರ ಸದುಪಯೋಗ ‌ಪಡೆದುಕೊಳ್ಳಲು ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತಪ್ಪದೆ ತರಬೇಕು.
ಸೂಚನೆ: ಪೇಸ್ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.

ಕಾರ್ಡ್ ವಿಶೇಷತೆಗಳು:
1.) B.P.L ಕಾರ್ಡ್ ದಾರರಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ.
2.) ರಾಜ್ಯದ 387 ಸರಕಾರಿ ಹಾಗೂ 390 ಖಾಸಗಿ ಆಸ್ಪತ್ರೆಯಲ್ಲಿ ಚಾಲ್ತಿಯಲ್ಲಿದೆ.
3.) ಬಡತನ ರೇಖೆಗಿಂತ ಮೇಲಿರುವ ಕುಟುಂಬಕ್ಕೆ ( APL) ವರ್ಷಕ್ಕೆ 1.5 ಲಕ್ಷ ರೂ ತನಕ‌ ಉಚಿತ ಚಿಕಿತ್ಸೆ.

ಇದೊಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದೆ. ದೇಶದ ಬಡವರು, ಅಶಕ್ತರು ಮತ್ತು ಶೋಷಿತ ಸಮುದಾಯಗಳಿಗೆ ಇರುವ ಯೋಜನೆ ಇದಾಗಿದೆ. ಸುಮಾರು 10 ಕೋಟಿ ಕುಟುಂಬ ಹಾಗೂ 50 ಕೋಟಿ ಜನರು ಇದರ ಫಲಾಭವಿಗಳಾಗಲು ಆರ್ಹರು.

- Advertisement -

Related news

error: Content is protected !!