Monday, June 8, 2026
spot_imgspot_img
spot_imgspot_img

ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಮೃತ್ಯು..!

- Advertisement -
- Advertisement -

ತಮಿಳುನಾಡಿನಿಂದ ಮೈಸೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ ಲಾರಿಯಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಚಾಮರಾಜನಗರ ಹನೂರು ಪಟ್ಟಣದ ಪೊಲೀಸ್ ಕ್ವಾಟ್ರಸ್ ಬಳಿಯ ಹುಲುಸುಗುಡ್ಡೆ ಬಳಿ ನಡೆದಿದೆ.

ಮೃತಪಟ್ಟ ಚಾಲಕನನ್ನು ಬಂಡಳ್ಳಿ ಗ್ರಾಮದ ಬಾಬು( 50) ಎಂದು ಗುರುತಿಸಲಾಗಿದೆ.

ಹನೂರು ತಾಲೂಕಿನ ನಾಲ್ ರೋಡ್ ಮೂಲಕ ತಮಿಳುನಾಡಿನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಲಾರಿ ಕ್ಲೀನರ್ ಅಧಾಲ್‌ ಪಾಷ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಜೆಸಿಬಿ ಮೂಲಕ ಲಾರಿ ತೆರವುಗೊಳಿಸಿ ಮೃತ ಚಾಲಕನ ಶವ ಹೊರತೆಗೆದರು. ಹನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!