Wednesday, July 2, 2025
spot_imgspot_img
spot_imgspot_img

ವಿಟ್ಲ: ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ನೇತ್ರಾವತಿ ವಲಯ ಮಂಗಳೂರು, ವಿಟ್ಲ ಶ್ರೀ ಪಂಚಲಿಂಗೇಶ್ವರ ಶಾಖೆ, ಬ್ರಹ್ಮಶ್ರೀ ನಾರಾಯಣ ಗುರು ಪೊನ್ನಟ್ಟು ಶಾಖೆ ಹಾಗೂ ಜಿಎಲ್ ಆಡಿಟೋರಿಯಂ ನೀರಕಣಿ ಶಾಖೆಯ ಸಂಯೋಜನೆಯಲ್ಲಿ ರಥಸಪ್ತಮಿಯ ಪ್ರಯುಕ್ತ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದಲ್ಲಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಕೃಷ್ಣಯ್ಯ ಕೆ ದ್ವೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ರಾಘವೇಂದ್ರ ರವರು ರಥಸಪ್ತಮಿಯ ಪ್ರಯುಕ್ತ ವಿಶೇಷ ಬೌದ್ಧಿಕ ನಡೆಸಿ ರಥಸಪ್ತಮಿಯ ಅರ್ಥ ವಿವರಣೆ ಮಹತ್ವವನ್ನು ತಿಳಿಸಿಕೊಟ್ಟರು.

ಸುಮಾರು 185 ಯೋಗ ಬಂಧುಗಳು 108 ಅಗ್ನಿಹೋತ್ರ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಯೋಗೀಶ್ , ಶಿಕ್ಷಕರು ಮತ್ತು ಸಹಶಿಕ್ಷಕರು ಎಲ್ಲಾ ಶಾಖೆಯ ಯೋಗ ಬಂಧುಗಳು ಯೋಗೇತರ ಬಂಧುಗಳು ಉಪಸ್ಥಿತರಿದ್ದರು.ಶ್ರೀಮತಿ ಗೌರಿ ಸ್ವಾಗತಿಸಿ, ಶ್ರೀಮತಿ ವೀಣಾ ಸೂರ್ಯ ನಮಸ್ಕಾರ ಮಂತ್ರ ಪಠಣೆ ಮಾಡಿದರು. ಶ್ರೀಮತಿ ಮಾಧುರಿ ಅಗ್ನಿಹೋತ್ರ ಮಂತ್ರ ಪಠಿಸಿ, ಚಿತ್ತರಂಜನ್ ವಂದಿಸಿದರು. ಶ್ರದ್ಧಾ , ಕುಮಾರಿ ರೇಣುಕ, ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!