




” ಬದುಕು ಮತ್ತು ಇತರರನ್ನು ಬದುಕಲು ಅನುಮತಿಸಿ ಯಾರನ್ನು ನೋಯಿಸಬೇಡಿ ಜೀವನವು ಎಲ್ಲಾ ಜೀವಿಗಳಿಗೆ ಪ್ರಿಯವಾಗಿದೆ ” ಸಂದೇಶ ಚೆನ್ನಾಗಿದೆ, ಆದರೆ ಪಾಲಿಸುವುದೇ ಸಾಧನೆ. ಇತರರ ಸಂಕಷ್ಟದ ನಿವಾರಣೆಗೆ ಅಧ್ಯಾತ್ಮ ಪ್ರಾರ್ಥನೆಗೆ ಉಪಾದಿ ಮಾಡಿಕೊಟ್ಟ ಈರ್ವರು ಇಳಿ ವಯಸ್ಸಿನ ಸಾಧಕರನ್ನು ಇಲ್ಲಿ ಉಲ್ಲೇಖಿಸಲು ಸಂತಸವಾಗುತ್ತಿದೆ.
ಲೋಕ ಸುತ್ತುವ ನಮಗೆ ಕಾಣುವುದು ಹೆಚ್ಚಾಗಿ ಡೊಂಕುಗಳೇ. ಆದರೆ ಇವರಲ್ಲಿ ಪರಿಶುದ್ಧ ಪರಮ ಆತ್ಮದ ಆಪ್ತತೆ ಕಂಡೆ. ಇದನ್ನು ಉತ್ಪ್ರೇಕ್ಷೆಯಾಗಿ ಬರೆಯಲು ಅವರಿಗೆ ನಾನೇನೂ ಆಪ್ತನಲ್ಲ. ಇದನ್ನು ಪ್ರತ್ಯಕ್ಷ ಕಂಡಾಗ ಯಕ್ಷಗಾನದ ಕಥೆಗಳಲ್ಲಿ ‘ಅಮ್ಮುದೇವಿ’ ಯ ಶುದ್ಧ ಭಕ್ತಿಗೆ ವೀರ ದೈವಗಳ ಪ್ರೀತಿಯ ಕರೆ ಇನ್ನೂ ಮನ ಪಟಲದಲ್ಲಿ ಒಮ್ಮೆ ಹಾದು ಹೋಯಿತು. ಭಗವತ್ ಜಿನೇಂದ್ರ, ಚಂದ್ರನಾಥ, ದಿನಾ ಧ್ವನಿಸುವ ದಾನಶೂರ ಕರ್ಣನಿಗೇ ದಾನ ಕೊಟ್ಟ ಮಾತೆ ಜ್ವಾಲಮಾಲಿನಿಯ ಪ್ರತಿಷ್ಠೆಯೇ ಅಲ್ಲ. ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ಅಧ್ಯಾತ್ಮದ ನಂಬಿಕೆಯುಳ್ಳ ಸದ್ದರ್ಮ ಆಸ್ತಿಕರಿಗೆ ಶ್ರದ್ದಾಲಯವನ್ನು ನಿರ್ಮಿಸಿಕೊಟ್ಟಿರಿ. 800ವರ್ಷಗಳ ಐತಿಹಾಸಿಕ ಕ್ಷೇತ್ರಕ್ಕೆ ಮೌನವಾಗಿ ಹೊಸ ರೂಪ ಕೊಟ್ಟು ಭಗವಾನ್ ರವರ ದರ್ಶನಕ್ಕೆ ಅನುವು ಮಾಡಿಕೊಟ್ಟಿರಿ. ಮಂಜಯ್ಯ ಹೆಗಡೆಯವರ ಕಲ್ಪನೆಯ ಸ್ಥಾಪನೆಗೆ ಕಮರುವ ಮುನ್ನ ನೀರೆರೆದು ಪೋಷಿಸಿದಿರಿ. ಉಳ್ಳವರೆಲ್ಲ ಅವಕಾಶವಿದ್ದರೂ ಬದುಕಿನ ಗಳಿಕೆಯ ಭಾಗದ ಹಂಚುವಿಕೆ ಮಾಡುವುದಿಲ್ಲ. ಬೇಡ ಒಂದಷ್ಟು ಸಮಯವನ್ನಾದರೂ ಹೆಸರೋ, ಸ್ಥಾನದ ಗಳಿಕೆಗಾಗಿ ಮಾಡುತ್ತಾರೆಯೇ ಹೊರತು, ನಿಮ್ಮಂತೆ ನಿಸ್ವಾರ್ಥ ಸೇವೆಯಾಗಿ ಮಾಡಿಲ್ಲ. ಮತ್ತೆ ಯಾವುದರಲ್ಲೂ ಇರದವರು ಎಲುಬಿಲ್ಲದ ನಾಲಿಗೆಯಲ್ಲಿ ಹಲುಬುತ್ತಾರೆ, ಕೊಟ್ಟರೂ ಕೊಡದಿದ್ದರೂ. ಹಲವು ಸಾಧುಗಳ ನಿರಂತರ ಪಾದಸ್ಪರ್ಶ ಕ್ಷೇತ್ರದಲ್ಲಿ ಹೊಸ ಪಾವಿತ್ರತೆಯ ಸಂಚಯನ ಮೂಡಿಸಿತು. ಹೊಸ ವಿಚಾರಗಳ ಮಂಥನ ನಡೆಸಿತು. ಪವಿತ್ರ ಧರ್ಮ ಕಾರ್ಯದಲ್ಲಿ ತಾಪ ಉಳ್ಳವರೂ ಇಲ್ಲದವರು ಒಟ್ಟಾಗಿ ಉಂಡು ಸಂತಸಪಟ್ಟರು. ಪ್ರಸ್ತುತ ಮೂಲ ಕ್ಷೇತ್ರವೆಣಿಸಿದ ಧರ್ಮದರ್ಶಿ ಕುಟುಂಬದ ಇರುವಿಕೆ ಸ್ಥಳೀಯರಿಗೆ ಧೈರ್ಯದ ಅನು ಕೊಟ್ಟಿತು. ” ಆದರ್ಶ ವ್ಯಕ್ತಿಗಳು ವೈಯಕ್ತಿಕ ಅಭಿವೃದ್ಧಿಯ ಕಡೆಗೆ ಮರುನಿರ್ದೇಶಿಸಬಹುದಾದ ಶಕ್ತಿಯನ್ನು ಸಂರಕ್ಷಿಸುತ್ತಾರೆ ಮತ್ತು ಪ್ರಜ್ಞೆಯ ಉನ್ನತ ಸ್ಥಿತಿಗಳನ್ನು ಸಾಧಿಸುತ್ತಾರೆ”ಎಂಬುದಕ್ಕೆ ಸಾಕ್ಷಿಯಾದ ಜಿತೇಶಣ್ಣ ಹಾಗೂ ದರ್ಶನ್ ಅಣ್ಣ ನಿಮ್ಮ ಹಗಲು ರಾತ್ರಿಗಳ ಶ್ರಮ ಇಲ್ಲಿ ಎದ್ದು ಕಾಣುತಿದೆ. ಬಸದಿ ಎದ್ದರೆ ಸಾಲದು ಅವಿರತ ಬಳಸಿಕೊಳ್ಳುವ ಶ್ರಾವಕರು ಬೇಕೆಂಬ ನಿಮ್ಮ ಇಂಗಿತ ಖಂಡಿತ ಈಡೇರಲಿ.. ಇಷ್ಟಕ್ಕೆ ನಿಲ್ಲದಿರಲಿ ನಿಮ್ಮ ಶ್ರಮ ಸಂಸ್ಕಾರ ಶಿಕ್ಷಣ ಸಮಾಜಕ್ಕೆ ಅವಶ್ಯಕವಿದೆ, ಕಲಿಯುವ ಹಂಬಲ ಹಲವರಿಗಿದೆ ಕಲಿಸುವ ಯೋಜನೆ ಸಾಕ್ಷತ್ಕರಿಸಬಹುದೇ? ಇಂತಹ “ಸಲಹೆ ಉಚಿತ ಆದರೆ ಸಮಸ್ಯೆ ಖಚಿತ” ಆದರೂ ನಿಮ್ಮಂತಹ ಸಾಧಕರಿಂದ ಸಾಧ್ಯ. “ಸಂತೋಷ ಮತ್ತು ಸಂಕಟದಲ್ಲಿ ಸಂತೋಷ ಮತ್ತು ದುಃಖದಲ್ಲಿ ನಾವು ಎಲ್ಲಾ ಜೀವಿಗಳನ್ನು ನಮ್ಮದೇ ಆದಂತೆಯೇ ಪರಿಗಣಿಸಬೇಕು”. ಈ ಗುಣದ ನಿಮ್ಮ ಪರಿಶ್ರಮ ಸಾಕಾರಗೊಂಡಿದೆ. ಪಕ್ಕ ವಿದೇಶಿಯರ ವ್ಯಕ್ತಿತ್ವವಿದ್ದರೂ ನಿಮ್ಮ ಹಾಲು ಹೃದಯ, ಮೃದು ಮಾತು, ಪ್ರೀತಿ ಮತ್ತು ನಿಷ್ಕಲ್ಮಶ ಹಂಬಲಕ್ಕೆ ಇನ್ನಷ್ಟು ಸಮಾಜ ಬೆಳಗಿಸುವ ಶಕ್ತಿಯಿದೆ. ಯಾಚನೆಯಿಲ್ಲದೆ, ಪ್ರಚಾರಕ್ಕೆ ಆದ್ಯತೆಯಿಲ್ಲದೆ ಸರ್ವರೂ ಭಾಗಿಗಳಾಗುವಂತೆ ಮಾಡಿದ ಶೈಲಿ ಮಾದರಿಯೇ.ಸರ್ವರೇ…. ಅದ್ಭುತ ಪ್ರಾರ್ಥನಾ ಕ್ಷೇತ್ರ ಲೋಕರ್ಪಣೆಯಾಗಿದೆ. ವಿಟ್ಲದ ಭಗವಾನ್ ಶ್ರೀ ಸಾವಿರದ ಎಂಟು ಚಂದ್ರನಾಥ ಸ್ವಾಮಿ ಬಸದಿ ಇದು ನವಿಲು ಬಸದಿ ಪಂಚಕಲ್ಯಾಣ ಸಂಭ್ರಮದೊಂದಿಗೆ ಆಸ್ಥಿಕ ಸಮಾಜಕ್ಕೆ ದೊರಕಿದೆ. ಆಸ್ತಿಕ ಪರರಿಗೆ ನೀಡಿದ ಉಪಕಾರ ಪುಣ್ಯದ ಕೆಲಸ ಇದನ್ನು ಮಾಡುವುದರ ಮುಖೇನವಾಗಿ ಜೀತೇಶ್ ದಂಪತಿ ಮತ್ತು ದರ್ಶನ್ ದಂಪತಿಯವರು ತಮ್ಮ ಬದುಕಿನಲ್ಲಿ ಮಾಡಬೇಕಾದ ಬೃಹತ್ ಧರ್ಮ ಕಾರ್ಯ ಪೂರೈಸಿದಂತಾಗಿದೆ.ಇದು ಜೈನ ಇತಿಹಾಸದಲ್ಲಿ ಬರೆದಿಡಬೇಕಾದ ದಿನಗಳು,ಇತಿಹಾಸದಲ್ಲೂ ಸದಾ. ನಾವೆಲ್ಲ ಸದ್ಧರ್ಮದಾಹಿಗಳಾಗಿ ಭಗವಂತನ ದರ್ಶನವನ್ನು ಸದಾ ಮಾಡುತ್ತಿರೋಣ. ನಿಮಗಿದೋ ಆತ್ಮದರ್ಶಿ ನಮನಗಳು. ಅರಹಂತ ತಮಗೆ ಸದಾ ಶುಭ ನೀಡಲಿ.*
🖊️ರಾಧಾಕೃಷ್ಣ ಎರುಂಬು*