Tuesday, June 30, 2026
spot_imgspot_img
spot_imgspot_img

ವಿಟ್ಲ: ಕೆಂಪು ಕಲ್ಲು ಅಕ್ರಮ ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ಅಕ್ರಮವಾಗಿ ಕೇರಳದಿಂದ ದ.ಕ. ಜಿಲ್ಲೆಗೆ ಕೆಂಪು ಕಲ್ಲು ಸಾಗಿಸುವ ವೇಳೆ ವಿಟ್ಲ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಕೆಂಪು ಕಲ್ಲು, ಲಾರಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.ಈ ಕುರಿತು ವಿಟ್ಲ ನಿವಾಸಿ ಮಹಮ್ಮದ್ ಮುಸ್ತಾಫ ಹಾಗೂ ಉಕ್ಕುಡ ನಿವಾಸಿ ಸಲಾಂ ಮತ್ತು ಧರ್ಮತ್ತಡ್ಕ ನಿವಾಸಿ ಅಶ್ರಫ್ ಎಂಬವರ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೂ.7,500 ಸಾವಿರ ಮೌಲ್ಯದ 270 ಕೆಂಪು ಕಲ್ಲು ಸಹಿತ ಸಾಗಾಟಕ್ಕೆ ಬಳಸಿದ 12ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದಜು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಕೇರಳ ಗಡಿ ಪ್ರದೇಶದ ಧರ್ಮತ್ತಡ್ಕದಿಂದ ಮಹಮ್ಮದ್ ಮುಸ್ತಫಾ, ಸಲಾಂ ಉಕ್ಕುಡ ಮತ್ತು ಅಶ್ರಫ್‌ ಧರ್ಮತ್ತಡ್ಕರವರು ಸೇರಿಕೊಂಡು ಅಕ್ರಮವಾಗಿ ಕೆಂಪು ಕಲ್ಲು ಸಾಗಾಟದ ದಂಧೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ವಿಟ್ಲ ಎಸೈ ರಾಮಕೃಷ್ಣ ಅವರು ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಮೂವರು ಇವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ವಿಟ್ಲ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!