Saturday, September 5, 2026
spot_imgspot_img
spot_imgspot_img

ವಿಟ್ಲ: ಲಂಚ ಸ್ವೀಕಾರ-ಲೋಕಾಯುಕ್ತ ಧಾಳಿ ಪ್ರಕರಣ; ಆರೋಪಿಗಳ ಜಾಮೀನು ಅರ್ಜಿ ಆದೇಶ ಸೆ.20ಕ್ಕೆ ಮುಂದೂಡಿಕೆ

- Advertisement -
- Advertisement -

ಸೆಪ್ಟೆಂಬರ್ 20 ರ ವರೆಗೂ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ಆರೋಪಿ ನಫೀಸ ಜೈಲಿನಲ್ಲೇ

ವಿಟ್ಲ: ಲಂಚ ಸ್ವೀಕರಿಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ಆರೋಪಿ ನಫೀಸ ಪರ ಸಲ್ಲಿಸಿದ ಜಾಮೀನು ಅರ್ಜಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿ ಆದೇಶ ಸೆ.20ಕ್ಕೆ ಮುಂದೂಡಿದೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದ್ದು, ಲೋಕಾಯುಕ್ತ ಪೋಲೀಸರು ಆರೋಪಿಗಳನ್ನು ಪೆರುವಾಯಿ ಗ್ರಾಮ ಪಂಚಾಯತಿಯಲ್ಲಿ ತಡ ರಾತ್ರಿವರೆಗೂ ವಿಚಾರಣೆ ನಡೆಸಿ ಮುಂಜಾನೆ ಸುಮಾರು 3 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಾದ ನಫೀಸಾ ಮತ್ತು ವಿಲಿಯಂಗೆ ನ್ಯಾಯಾಂಗ ಬಂಧನ ವಿಧಿಸಿದೆ.ಇದೀಗ ಆರೋಪಿ ನಫೀಸಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆ. 20 ಕ್ಕೆ ಮುಂದೂಡಿದೆ. ಸೆ. 20 ರ ವರೆಗೂ ಆರೋಪಿ ನೆಫೀಸ ಮತ್ತು ವಿಲಿಯಂ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.

- Advertisement -

Related news

error: Content is protected !!