ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ನಲ್ಲಿ ಮಿಂಚಿದ ವಿಟ್ಲವ ಬಾಡಿ ಬಿಲ್ಡರ್



ವಿಟ್ಲ: ವಿಟ್ಲದ ಫಿಟ್ ನೆಸ್ ಜಿಮ್ ನ ಮಾಲಕಸುನೀಲ್ ಪಾಯಸ್ ಅವರು ಸಿಂಗಾಪುರದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಅಮೇರಿಕಾದಲ್ಲಿ ನಡೆಯಲಿರುವ ಒಲಿಂಪಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸಿಂಗಾಪುರದಲ್ಲಿ ನಡೆದ ಐ.ಎನ್.ಬಿ.ಎ ನ್ಯಾಚುರಲ್ ಏಷ್ಯಾನ್ ಗೇಮ್ ಓಪನ್ ಬಾಡಿ ಬಿಲ್ಡಂಗ್ನಲ್ಲಿ ಚಿನ್ನ, ೪೦ಪ್ಲಸ್ ಮಾಸ್ಟರ್ನಲ್ಲಿ ಚಿನ್ನ ಹಾಗೂ ಟೈಟಲ್ ಮೆನ್ಸ್ ಕೋಸಿಕ್ ಪಿಜೀಕ್ನಲ್ಲಿ ಚಿನ್ನ ಹಾಗೂ ೪೦ ಪ್ಲಸ್ ಮಾಸ್ತರ್ನಲ್ಲಿ ಕ್ಲೋಸಿಕ್ ನಲ್ಲಿ ಪೀಜಿಕ್ ಚಿನ್ನ ಟೈಟಲ್ ಹಾಗೂ ೨ ಪೋರೊ ಕಾರ್ಡ್ ಪಡೆದಿರುತ್ತಾರೆ.
ನವೆಂಬರ್ ನಲ್ಲಿ ಅಮೇರಿಕಾದಲ್ಲಿ ನಡೆಯುವ ನ್ಯಾಚುರಲ್ ಓಲಂಪಿಯಾಕ್ಕೆ ಇವರು ಆಯ್ಕೆಯಾಗಿದ್ದಾರೆ.ಇವರು ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಅರಮನೆ ರಸ್ತೆಯಲ್ಲಿ ಫಿಟ್ ನೆಸ್ ಜಿಮ್ ನಡೆಸಿಕೊಂಡು ಬರುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಸುನೀಲ್ ಅವರು ಈ ಹಿಂದೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು.








