Saturday, June 27, 2026
spot_imgspot_img
spot_imgspot_img

ವಿಟ್ಲ: ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ಜಾಮೀನು ಮಂಜೂರು

- Advertisement -
- Advertisement -

ವಿಟ್ಲ ಠಾಣಾ ವ್ಯಾಪ್ತಿಯ ಉಕ್ಕುಡ ಎಂಬಲ್ಲಿಯ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ದಿನಾಂಕ 30-01-2018 ರಂದು ಅಪರಾಧ ಕ್ರಮಾಂಕ 26/18 ರಂತೆ ಕಲಂ: 341, 34,323,324,354,447, ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಮೊದಲನೇ ಆರೋಪಿ ಮಹಮ್ಮದ್ ಇರ್ಷಾದ್ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈ ಆರೋಪಿಯನ್ನು ವಿಟ್ಲ ಪೋಲೀಸರು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಈ ಆರೋಪಿಗೆ ಮಾನ್ಯ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.ಆರೋಪಿಯ ಪರವಾಗಿ ವಿಟ್ಲ ಪ್ರಮಾ ಅಸೋಸಿಯೇಟ್ಸ್ ವಕೀಲರಾದ ಪ್ರಶಾಂತ್ ಪೂಜಾರಿ,ಮನೋಜ್ ಕುಮಾರ್ ಯು ಹಾಗೂ ವಿನೋದ್ ಕುಮಾರ್ ವಾದ ಮಂಡಿಸಿದರು.

- Advertisement -

Related news

error: Content is protected !!