


ವಿಟ್ಲ: ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಭಾಸ್ಕರ ಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ದ.ಕ. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ್ ಒಕ್ಕೂಟದಿಂದ ಸಂಘದ ಸದರಿಗೆ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಸಂಘದ ಅಧ್ಯಕ್ಷ ಮೋಹನ್ ಕಾಯರ್ ಮಾರ್ ಸಭಾಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಸಂಘವು ಪ್ರಸಕ್ತ ವರ್ಷ 271.48 ಲಕ್ಷ ವ್ಯವಹಾರ ನಡೆಸಿ, 5.77 ಲಕ್ಷ ಲಾಭ ಗಳಿಸಿರುತ್ತದೆ. ಸಂಘದ ಸದಸ್ಯರಿಗೆ 25% ನೀಡಲಾಗುತ್ತದೆ ಎಂದು ತಿಳಿಸಿದರು.


ಸಂಘದ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಜಯರಾಂ ಬಲ್ಲಾಳ ವಂದಿಸಿದರು. ನಿರ್ದೇಶಕರುಗಳಾದ ಬೋಜಪ್ಪ ಗೌಡ, ವೀರಪ್ಪ ಗೌಡ, ಸತೀಶ್ಚಂದ್ರ, ಲೀಲಾವತಿ, ಲತಾ, ರೇವತಿ, ಲೋಕನಾಥ ಶೆಟ್ಟಿ, ಪುಷ್ಪರಾಜ, ಆನಂದ ಶೆಟ್ಟಿ ಮತ್ತು ದೆನಿಸ್ ವೇಗಸ್ ಹಾಲು ಪರೀಕ್ಷಕ ಜಗನ್ನಾಥ, ಸಹಾಯಕ ಜೀವನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.








