


ಬೈರೂತ್: ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಜುಲ್ಲಾ ಹೇಳಿಕೊಂಡಿದೆ. ಭಾನುವಾರ ರಾತ್ರಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
ಖಮೇನಿ ಅವರ ಪವಿತ್ರ ರಕ್ತಕ್ಕೆ ಪ್ರತೀಕಾರವಾಗಿ, ಲೆಬನಾನ್ ಹಾಗೂ ಅಲ್ಲಿನ ಜನರ ರಕ್ಷಣೆಗಾಗಿ, ಹಾಗೆಯೇ ಇಸ್ರೇಲ್ನ ಸರಣಿ ದಾಳಿಗಳಿಗೆ ಪ್ರತಿಯಾಗಿ ಕ್ಷಿಪಣಿಗಳ ಸುರಿಮಳೆ ಮತ್ತು ಡ್ರೋನ್ಗಳ ದಾಳಿ ನಡೆಸಲಾಗಿದೆ ಎಂದು ಹಿಜ್ಜುಲ್ಲಾ ತಿಳಿಸಿದೆ.ಇದಕ್ಕೆ ಇಸ್ರೇಲ್ ಕೂಡ ಪ್ರತ್ಯುತ್ತರ ಕೊಟ್ಟಿದೆ. ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಪ್ರತಿದಾಳಿ ನಡೆಸಿದೆ. ಬೈರೂತ್ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿ ಇಸ್ರೇಲ್ ಸೋಮವಾರ ದಾಳಿ ನಡೆಸಿದೆ ಎಂದು ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ.
ಅದಕ್ಕಾಗಿ ಪೂರ್ವ ಮತ್ತು ದಕ್ಷಿಣ ಲೆಬನಾನ್ನ ಸುಮಾರು 50 ಹಳ್ಳಿಗಳ ಜನರನ್ನ ಸ್ಥಳಾಂತರಿಸುವಂತೆ ಇಸ್ರೇಲಿ ಸೇನೆ ಒತ್ತಾಯಿಸಿದೆ. ನಾಗರಿಕರು ತಮ್ಮ ಮನೆಗಳನ್ನ ತೆರವುಗೊಳಿಸಿ ಹಳ್ಳಿಗಳಿಂದ ಕನಿಷ್ಠ 1,000 ಮೀಟರ್ ದೂರದಲ್ಲಿರುವ ತೆರೆದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಹೇಳಿದೆ.








