Friday, March 29, 2024
spot_imgspot_img
spot_imgspot_img

ವಿಟ್ಲ ಅರಮನೆಯಲ್ಲಿ ಕೇಪು ಶ್ರೀ ಮಲರಾಯಿ ದೈವದ ನೇಮೋತ್ಸವ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಕಾಲಾವಧಿ ಜಾತ್ರೆಯ ಪ್ರಯುಕ್ತ ವಿಟ್ಲ ಅರಮನೆಯಲ್ಲಿ ಕೇಪು ಶ್ರೀ ಮಲರಾಯಿ ದೈವದ ನೇಮೋತ್ಸವ ನಡೆಯಿತು.

19 ಮಾಗಣೆಯ ವಿಟ್ಲ ಸೀಮೆಯ ಡೊಂಬ ಹೆಗಡೆ ಅರಸು ಮನೆತನದ ವಿಟ್ಲ ಅರಮನೆಯಲ್ಲಿ ಶ್ರೀ ಬಂಗಾರು ಅರಸರ ನೇತೃತ್ವದಲ್ಲಿ ನೇಮೋತ್ಸವ ನಡೆಯಿತು ದಿನಾಂಕ 26.01.2021 ನೇ ಮಂಗಳವಾರದಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೈವಗಳ ನೇಮೋತ್ಸವದ ಬಳಿಕ ಕೇಪು ಶ್ರೀ ಮಲರಾಯಿ ದೈವದ ಭಂಡಾರ ವಿಟ್ಲ ಅರಮನೆಗೆ ಬಂದು ಮರುದಿನ ದಿನಾಂಕ 27.01.2021 ರಂದು ಧರ್ಮನೇಮ ನಡೆದಿದ್ದು ಇದು ಪುರಾತನ ಕಾಲದಿಂದಲೂ ಬಂದ ಪದ್ದತಿ.

ಪ್ರಸ್ತುತ ವಿಟ್ಲ ಅರಮನೆಯಲ್ಲಿ ಸುಮಾರು 30 ಕುಟುಂಬಗಳು ಮತ್ತು 150 ಸದಸ್ಯರು ಇರುತ್ತಾರೆ. ಹೊಗೆನಾಡು ಶಾಸನದಲ್ಲಿ ಕ್ರಿ.ಶ 1257 ರಲ್ಲಿ ವಿಟ್ಲ ಡೊಂಬ ಹೆಗಡೆ ಅರಸು ಮನೆತನದ ಉಲ್ಲೇಖವಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ,ಎರುಂಬು,ಕೇಪು.ಒಕ್ಕೆತ್ತೂರು,ಮಾಮೇಶ್ವರ,ಕುಂಡಡ್ಕ ಹಾಗೇ ಇನ್ನು ಅನೇಕ ದೇವಸ್ಥಾನಗಳು ವಿಟ್ಲ ಅರಮನೆಯ ಆಡಳಿತಕ್ಕೆ ಒಳಪಟ್ಟ ಇತಿಹಾಸವಿದೆ.ಪುರಾತನ ಕಾಲದಿಂದಲೂ ವಿಟ್ಲ ಅರಮನೆಯ ಪಾರ್ಥಂಪಾಡಿ ಚಾವಡಿ ಬಹಳ ವೈಶಿಷ್ಟ್ಯವನ್ನು ಹೊಂದಿದೆ.ವಿಟ್ಲ ಸೀಮೆಯ 16 ಗ್ರಾಮದ ಗುರಿಕಾರರು ಮತ್ತು ಊರಿನ ಜನರ ಸಮ್ಮುಖದಲ್ಲಿ ಧರ್ಮಮೆಚ್ಚಿ ನಡೆಯಿತು.

- Advertisement -

Related news

error: Content is protected !!