Thursday, April 25, 2024
spot_imgspot_img
spot_imgspot_img

ವಿಟ್ಲ: ಪ್ರಕೃತಿ ವಿಕೋಪದಿಂದಾಗಿ ಕುಸಿದ ಅರ್ಕೆಚ್ಚಾರು, ನೇರ್ಲಾಜೆ ರಸ್ತೆ; ಪಂಚಾಯತ್ ಅಧಿಕಾರಿಗಳಿಂದ ಪರಿಶೀಲನೆ!

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಗ್ರಾಮದ ಅರ್ಕೆಚ್ಚಾರು, ನೇರ್ಲಾಜೆ ರಸ್ತೆಯು ಪ್ರಕೃತಿ ವಿಕೋಪದಿಂದಾಗಿ ಕುಸಿದಿದ್ದು, ರಸ್ತೆಯ ತಡೆಗೋಡೆಯು ಸಂಪೂರ್ಣವಾಗಿ ನೆಲಕ್ಕುರುಳಿದೆ.

ಕಂಬಳಬೆಟ್ಟು, ಮಿತ್ತೂರು ಸಂಪರ್ಕ ರಸ್ತೆಯಾದ ಅರ್ಕೆಚ್ಚಾರು, ನೇರ್ಲಾಜೆ ಸೇರುವ ರಸ್ತೆಯಾಗಿದೆ. ಈ ಕಡೆ ಹಲವು ಮನೆಗಳಿದ್ದು ಸುಮಾರು ಸಮಯಗಳಿಂದ ಜನರು ರಸ್ತೆ ಕುಸಿತದಿಂದಾಗಿ ಕಷ್ಟ ಅನುಭವಿಸುತ್ತ ಇದ್ದಾರೆ. ಹಾಗಾಗಿ ಗ್ರಾಮಸ್ಧರು ಒಟ್ಟಾಗಿ ಸೇರಿ ಇಡ್ಕಿದು ಗ್ರಾಮ ಪಂಚಾಯತ್‌ಗೆ ಮನವಿಯನ್ನ ನೀಡಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ, ಹಾಗೂ ಪಂಚಾಯತ್ ಸದಸ್ಯರು ಸ್ಧಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಪಿಡಿಓ ಗೋಕುಲ್ ದಾಸ್ ಭಕ್ತ, ಗ್ರಾಮ ಪಂಚಾಯತ್ ಸದಸ್ಯರಾದ ತಿಲಕ್‌ರಾಜ್.ಶೆಟ್ಟಿ ಹಾಗೂ ಪದ್ಮನಾಭ ಸಪಲ್ಯ ಸ್ಧಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿ, ರಸ್ತೆಗಳು ಸಂಪೂರ್ಣವಾಗಿ ಕುಸಿದಿರುವುದನ್ನು ಗಮನಿಸಿದರು.

ಪ್ರಕೃತಿ ವಿಕೋಪದಿಂದಾಗಿ ರಸ್ತೆಗೆ ಹಾನಿಯಾಗಿದೆ ಇದರ ಸಲುವಾಗಿ ಶಾಸಕ ಸಂಜೀವ ಮಠಂದೂರು ಇವರಿಗೆ ಮನವಿಯನ್ನ ನೀಡಲಾಯಿತು. ಅದಷ್ಟು ಶೀಘ್ರದಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಭರವಸೆಯನ್ನ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಧರಾದ ದಿವಾಕರ್ ದಾಸ್ ನೇರ್ಲಾಜೆ, ಗಣೇಶ್ ಆಚಾರ್ಯ, ಮನೋಜ್, ಯತೀಶ್ ಹಾಗೂ ಹಲವರು ಸ್ಧಳದಲ್ಲಿ ಇದ್ದು ಪಕೃತಿ ವಿಕೋಪದಿಂದ ಹಾನಿಯಾಗಿರುವ ರಸ್ತೆಗಳನ್ನು ತೋರಿಸಿ ವಿವರಣೆ ನೀಡಿದರು. ತಡೆಗೋಡೆಯನ್ನ ನಿರ್ಮಿಸಿ ರಸ್ತೆಯನ್ನ ಸರಿಪಡಿಸಬೇಕೆಂದು ಗ್ರಾಮಸ್ಧರ ಬೇಡಿಕೆಯಾಗಿದೆ.

- Advertisement -

Related news

error: Content is protected !!